Isaiah 21:1 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸಮುದ್ರದ ಮರುಭೂಮಿಗೆ ದುಃಖದ ಸಂದೇಶ: ನೆಗೆವ್ ಮೂಲಕ ಬೀಸುವ ಬಿರುಗಾಳಿಯಂತೆ ಮರುಭೂಮಿಯಿಂದಲೂ ಭಯಂಕರ ದೇಶದಿಂದಲೂ ಒಬ್ಬನು ದಂಡೆತ್ತಿ ಬರುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸಮುದ್ರ ಹಾಗೂ ಅಡವಿಯ ವಿಷಯವಾದ ದೈವೋಕ್ತಿ. ದಕ್ಷಿಣ ಸೀಮೆಯಲ್ಲಿ ಬೀಸುವ ಬಿರುಗಾಳಿಯಂತೆ ಅರಣ್ಯದ ಕಡೆಯ ಭಯಂಕರ ದೇಶದಿಂದ (ದೊಡ್ಡ ಅಪಾಯ) ಬರುತ್ತದೆ ಎಂಬ
Kannada BSI Bible 2016
ಸಮುದ್ರದ ಅಡವಿಯ ವಿಷಯವಾದ ದೈವೋಕ್ತಿ ದಕ್ಷಿಣ ಸೀಮೆಯಲ್ಲಿ ಬೀಸುವ ಬಿರುಗಾಳಿ ದಾಟಿಹೋಗುವಂತೆ ಅದು ಮರುಭೂಮಿ ಕಡೆಯಿಂದ ಭಯಂಕರವಾದ ದೇಶದಿಂದ ಬರುತ್ತದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಕಡಲಡವಿಯ ವಿಷಯವಾದ ದೈವೋಕ್ತಿ. ದಕ್ಷಿಣಸೀಮೆಯಲ್ಲಿ ಬೀಸುವ ಬಿರುಗಾಳಿಯಂತೆ ಅರಣ್ಯದ ಕಡೆಯ ಭಯಂಕರ ದೇಶದಿಂದ [ದೊಡ್ಡ ಅವಾಂತರ] ಬರುತ್ತದೆ.
Kannada Bible (KNCL) BSI 2016
ಕಡಲಡವಿಯ ಕುರಿತು ದೈವೋಕ್ತಿ: ದಕ್ಷಿಣ ಸೀಮೆಯ ನಾಡನ್ನು ಕಸದಂತೆ ಗುಡಿಸುವ ಸುಂಟರಗಾಳಿಯ ಹಾಗೆ, ಅರಣ್ಯದ ಕಡೆಯ ಭಯಂಕರ ನಾಡಿನಿಂದ ಗಂಡಾಂತರ ಬರಲಿದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸಮುದ್ರತೀರದ ಮರುಭೂಮಿಯ ವಿಷಯವಾದ ಪ್ರವಾದನೆ: ದಕ್ಷಿಣ ಸೀಮೆಯಲ್ಲಿ ಬೀಸುವ ಬಿರುಗಾಳಿ ದಾಟಿ ಹೋಗುವಂತೆ ಆಕ್ರಮಣಕಾರರು ಮರುಭೂಮಿ ಕಡೆಯಿಂದ ಭಯಂಕರವಾದ ದೇಶದಿಂದ ಬರುತ್ತಾರೆ.