Isaiah 21:11 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದೂಮದ ಕುರಿತು ದುಃಖದ ದೈವೋಕ್ತಿ: ಸೇಯಿರ್‌ನಿಂದ ಎದೋಮನ್ನು ಯಾರೋ ಒಬ್ಬನು, “ಕಾವಲುಗಾರನೇ, ರಾತ್ರಿ ಮುಗಿಯಲು ಎಷ್ಟು ಸಮಯ ಉಂಟು? ರಾತ್ರಿಗೆ ಇನ್ನು ಎಷ್ಟು ಕಾಲ ಉಂಟು?” ಎಂದು ಕೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದೂಮದ ಬಗ್ಗೆ ದೈವೋಕ್ತಿ. ಆತನು ಸೇಯೀರಿನಿಂದ ನನ್ನನ್ನು ಕರೆದು, “ಕಾವಲುಗಾರನೇ, ಈಗ ರಾತ್ರಿ ಎಷ್ಟು ಸಮಯವಾಯಿತು? ಕಾವಲುಗಾರನೇ, ರಾತ್ರಿ ಸಮಯ ಎಷ್ಟು ಕಳೆಯಿತು
Kannada BSI Bible 2016
ದೂಮದ ವಿಷಯವಾದ ದೈವೋಕ್ತಿ, ಆತನು ಸೇಯಾರಿನಿಂದ ನನಗೆ ಕರೆದನು. ಹೇಗಂದರೆ, ಕಾವ ಲುಗಾರನೇ, ಈಗ ರಾತ್ರಿ ಎಷ್ಟು ಕಳೆಯಿತು? ಕಾವಲು ಗಾರನೇ ರಾತ್ರಿ ಎಷ್ಟು ಕಳೆಯಿತು?
Kannada BSI JV (ಕನ್ನಡ ಸತ್ಯವೇದವು J.V. (BSI))
ದೂಮದ ವಿಷಯವಾದ ದೈವೋಕ್ತಿ. ಕಾವಲುಗಾರನೇ, ಈಗ ರಾತ್ರಿ ಎಷ್ಟು ಕಳೆಯಿತು, ಕಾವಲುಗಾರನೇ, ರಾತ್ರಿ ಎಷ್ಟು ಕಳೆಯಿತು ಎಂಬ ಕೂಗು ಸೇಯೀರಿನಿಂದ ನನಗೆ ಕೇಳಿಸುತ್ತಿತ್ತು.
Kannada Bible (KNCL) BSI 2016
‘ದೂಮ’ ಕುರಿತ ದೈವೋಕ್ತಿ: “ಪಹರೆಯವನೇ, ರಾತ್ರಿ ಕಳೆಯುವುದು ಯಾವಾಗ? ಪಹರೆಯವನೇ, ಕತ್ತಲು ಕಳೆಯುವುದು ಯಾವಾಗ?” ಎಂಬ ಕೂಗು ಸೇಯಾರಿನಿಂದ ನನಗೆ ಕೇಳಿಬಂತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದೂಮ ವಿಷಯವಾದ ಪ್ರವಾದನೆ: ಸೇಯೀರಿನಿಂದ ನನ್ನನ್ನು ಯಾರೋ ಹೀಗೆ ಕರೆಯುತ್ತಿದ್ದಾರೆ, “ಕಾವಲುಗಾರನೇ, ಈಗ ರಾತ್ರಿ ಎಷ್ಟು ಕಳೆಯಿತು? ಕಾವಲುಗಾರನೇ, ರಾತ್ರಿ ಎಷ್ಟು ಕಳೆಯಿತು?”