Isaiah 25:11 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನು ತನ್ನ ಕೈಗಳನ್ನು ಈಜುವವನಂತೆ ಅಗಲವಾಗಿ ತೆರೆದು ಮನುಷ್ಯರು ಹೆಚ್ಚಳಪಡುವ ವಸ್ತುಗಳನ್ನೆಲ್ಲಾ ಬಾಚಿಕೊಳ್ಳುವನು. ಜನರು ತಯಾರಿಸಿದ ಅಂದವಾದ ವಸ್ತುಗಳನ್ನು ಒಟ್ಟುಗೂಡಿಸಿ ಬಿಸಾಡುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈಜುವವನು ಕೈಯಾಡಿಸುವಂತೆ ಅವರು ಅದರಲ್ಲಿಯೇ ಕೈಯಾಡಿಸುವರು; ಆದರೆ ಯೆಹೋವನು ಅವರ ಗರ್ವವನ್ನೂ, ಕೈಯ ಚಮತ್ಕಾರವನ್ನೂ ತಗ್ಗಿಸಿಬಿಡುವನು.
Kannada BSI Bible 2016
ಈಜುವವನು ಈಜುವದಕ್ಕೆ ತನ್ನ ಕೈಗಳನ್ನು ಹರಡಿಕೊಂಡ ಹಾಗೆ, ಆತನು ಅದರ ಮಧ್ಯೆ ತನ್ನ ಕೈಗಳನ್ನು ಚಾಚುವನು. ಅದರ ಗರ್ವವನ್ನು ಅವರ ಕೊಳ್ಳೆಯೊಂದಿಗೆ ತಗ್ಗಿಸಿ ಬಿಡುವನು.ದುರ್ಗಮವಾಗಿಯೂ ಎತ್ತರವಾಗಿ ಯೂ ಇರುವ ನಿನ್ನ ಕೋಟೆಗಳನ್ನು ಆತನು ಕೆಡವಿ, ತಗ್ಗಿಸಿ, ನೆಲಸಮಮಾಡಿ ದೂಳಿಗೆ ತರುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಈಜುವವನು ಕೈಯಾಡಿಸುವಂತೆ ಅದರಲ್ಲಿಯೇ ಕೈಯಾಡಿಸುವದು; [ಯೆಹೋವನು] ಅದರ ಗರ್ವವನ್ನೂ ಕೈಯ ಚಮತ್ಕಾರವನ್ನೂ ತಗ್ಗಿಸಿಬಿಡುವನು.
Kannada Bible (KNCL) BSI 2016
ಈಜುವವರು ಕೈಯಾಡಿಸುವಂತೆ ಮೋವಾಬ್ ರೊಚ್ಚಿನಲ್ಲಿ ಕೈಯಾಡಿಸುವುದು. ಅದರ ಗರ್ವವನ್ನೂ ಕೈಚಳಕವನ್ನೂ ಸರ್ವೇಶ್ವರ ಸ್ವಾಮಿ ಅಡಗಿಸಿಬಿಡುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈಜುವವನು ಈಜುವುದಕ್ಕೆ ಕೈಗಳನ್ನು ಹರಡಿಕೊಂಡ ಹಾಗೆ, ಅವರು ತಮ್ಮ ಕೈಗಳನ್ನು ಚಾಚುವರು. ಆದರೆ ದೇವರು ಅವರ ಗರ್ವವನ್ನೂ ಅವರ ಕೈ ಕೆಲಸವನ್ನೂ ತಗ್ಗಿಸಿಬಿಡುವರು.