Isaiah 27:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾನು ಕೋಪಗೊಂಡಿಲ್ಲ. ಆದರೆ ಯುದ್ಧ ನಡೆಯುತ್ತಿರುವಾಗ ಯಾರಾದರೂ ಮುಳ್ಳುಬೇಲಿಯನ್ನು ಹಾಕಿದರೆ, ನಾನು ಮುನ್ನುಗ್ಗಿ ಅದನ್ನು ಸುಟ್ಟುಹಾಕುವೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ರೌದ್ರವು ನನ್ನಲ್ಲಿಲ್ಲ; ದತ್ತೂರಿ ಮತ್ತು ಮುಳ್ಳು ನನಗೆ ಎದುರುಬಿದ್ದರೆ, ಅವುಗಳಿಗೆ ವಿರುದ್ಧವಾಗಿ ಯುದ್ಧಮಾಡಿ, ಒಟ್ಟಿಗೆ ಸುಟ್ಟುಬಿಡುವೆನು.
Kannada BSI Bible 2016
ರೌದ್ರವು ನನ್ನಲ್ಲಿ ಇಲ್ಲ; ಯಾವನಾದರೂ ಮುಳ್ಳು ದತ್ತೂರಿಗಳನ್ನು ನನಗೆ ವಿರೋಧವಾಗಿ ಯುದ್ಧಕ್ಕೆ ಇಟ್ಟರೆ ನಾನು ಅವುಗಳನ್ನು ಹಾದು ಹೋಗಿ ಅವುಗಳನ್ನು ಒಟ್ಟಿಗೆ ಸುಡುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ರೌದ್ರವು ನನ್ನಲಿಲ್ಲ; ಮುಳ್ಳುಗಿಳ್ಳು ನನಗೆ ಎದುರುಬಿದ್ದರೆ ಎಷ್ಟೋ ಒಳ್ಳೇದು! ಅವುಗಳಿಗೆ ವಿರುದ್ಧವಾಗಿ ಯುದ್ಧಕ್ಕೆ ನಡೆದು ಹೋಗಿ ಒಟ್ಟಿಗೆ ಸುಟ್ಟುಬಿಡುವೆನು.
Kannada Bible (KNCL) BSI 2016
ಇದರ ಬಗ್ಗೆ ನನಗೆ ಇನ್ನಿಲ್ಲ ರೌದ್ರ, ಇದರೊಳಗಿಲ್ಲ ಮುಳ್ಳುಕಳ್ಳಿಗಳ ಗಹ್ವರ, ಇದ್ದಿದ್ದರೆ ಸುಟ್ಟು ಭಸ್ಮ ಮಾಡುತ್ತಿದ್ದೆ ಹೂಡಿ ಸಮರ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ರೌದ್ರವು ನನ್ನಲ್ಲಿ ಇಲ್ಲ. ಯಾವನಾದರೂ ಮುಳ್ಳು ದತ್ತೂರಿಗಳನ್ನು ನನಗೆ ವಿರೋಧವಾಗಿ ಯುದ್ಧಕ್ಕೆ ಇಟ್ಟರೆ, ನಾನು ಅವುಗಳನ್ನು ಹಾದು ಹೋಗಿ, ಅವುಗಳನ್ನು ಒಟ್ಟಿಗೆ ಸುಡುವೆನು.