Isaiah 28:28 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸ್ತ್ರೀಯು ರೊಟ್ಟಿಯನ್ನು ತಯಾರಿಸುವಾಗ ಹಿಟ್ಟನ್ನು ಕೈಯಲ್ಲಿ ನಾದಿ ಅದನ್ನು ಚೆನ್ನಾಗಿ ಹದಗೊಳಿಸುವಳು. ಆದರೆ ಆಕೆ ಹಾಗೆಯೇ ಮಾಡುತ್ತಾ ಇರುವದಿಲ್ಲ. ಅದೇ ರೀತಿಯಲ್ಲಿ ಯೆಹೋವನು ಜನರನ್ನು ಶಿಕ್ಷಿಸುವನು. ಆತನು ಬಂಡಿಯ ಚಕ್ರದಿಂದ ಬೆದರಿಸುವನು. ಆದರೆ ಅವರನ್ನು ಸಂಪೂರ್ಣವಾಗಿ ಪುಡಿಪುಡಿ ಮಾಡುವದಿಲ್ಲ. ಅವರನ್ನು ತುಳಿದುಬಿಡಲು ಅನೇಕ ಕುದುರೆಗಳನ್ನು ಉಪಯೋಗಿಸುವದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಗೋದಿಯ ಕಾಳನ್ನು ನುಚ್ಚು ಮಾಡುವನೋ? ತನ್ನ ಕುದುರೆಗಳ ಗಾಡಿಯ ಚಕ್ರವನ್ನು ಹೊಡೆಯುತ್ತಾ ಗುಂಡನ್ನು ಉರುಳಿಸುತ್ತಾ ಯಾವಾಗಲೂ ಒಕ್ಕುತ್ತಿರುವುದಿಲ್ಲ, ನುಚ್ಚು ಮಾಡುವುದಿಲ್ಲ.
Kannada BSI Bible 2016
ರೊಟ್ಟಿಯ ಕಾಳನ್ನು ಕುಟ್ಟುವನೋ? ಅವನು ಯಾವಾಗಲೂ ಅದನ್ನು ಒಕ್ಕುವದಿಲ್ಲ; ಇಲ್ಲವೇ ಅವನ ಬಂಡಿಯ ಚಕ್ರದಿಂದ ಅದರ ಮೇಲೆ ಒಡೆಯುವದಿಲ್ಲ, ಅಥವಾ ಅವನ ಕುದುರೆ ಸವಾರರಿಂದ ಕುಣಿಸುವದಿಲ್ಲ.ಈ ವಿವೇಕವು ಸಹ ಅತಿಶಯಾಲೋಚನಾಪರನೂ ಕಾರ್ಯಸಾಧಕ ಜ್ಞಾನಶ್ರೇಷ್ಠನೂ ಆಗಿರುವ ಸೈನ್ಯಗಳ ಕರ್ತನಿಂದಲೇ ಹೊರಡುತ್ತದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಗೋದಿಯ ಕಾಳನ್ನು ನುಚ್ಚು ನುಚ್ಚು ಮಾಡುವನೋ? ತನ್ನ ಕುದುರೆಗಳನ್ನು ಹೊಡೆಯುತ್ತಾ ಗುಂಡನ್ನು ಗಿರ್ರನೆ ಉರುಳಿಸುತ್ತಾ ಯಾವಾಗಲೂ ಒಕ್ಕುತ್ತಿರುವದಿಲ್ಲ; ನುಚ್ಚು ನುಚ್ಚು ಮಾಡನು.
Kannada Bible (KNCL) BSI 2016
ಗೋದಿಯನ್ನು ಒಕ್ಕುವಾಗ ಕುದುರೆಗಳನ್ನು ಹೊಡೆದು ಗುಂಡನ್ನು ಉರುಳಿಸಿ ಕಾಳನ್ನು ಪುಡಿಪುಡಿಮಾಡುವನೋ? ಇಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ರೊಟ್ಟಿಗಾಗಿ ಗೋಧಿಯ ಕಾಳನ್ನು ಪುಡಿಮಾಡಬೇಕು; ಯಾವಾಗಲೂ ಅದನ್ನು ಒಕ್ಕುತ್ತಿರುವುದಿಲ್ಲ. ಅವನ ಬಂಡಿಯ ಚಕ್ರದಿಂದ ಅದರ ಮೇಲೆ ಒಡೆಯುವುದಿಲ್ಲ ಅವನ ಕುದುರೆ ಸವಾರದಿಂದ ಒಕ್ಕುತ್ತಿರುವುದಿಲ್ಲ.