Isaiah 28:29 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಈ ಪಾಠವು ಸರ್ವಶಕ್ತನಾದ ಯೆಹೋವನಿಂದ ಬರುತ್ತದೆ. ಆತನು ಆಶ್ಚರ್ಯಕರವಾದ ಸಲಹೆಯನ್ನು ಕೊಡುತ್ತಾನೆ. ಆತನು ನಿಜವಾಗಿಯೂ ಜ್ಞಾನಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈ ವಿವೇಕವು ಸಹ ಅತಿಶಯವಾದ ಆಲೋಚನಾಪರನೂ, ಸುಜ್ಞಾನ ಶ್ರೇಷ್ಠನೂ ಆಗಿರುವ, ಸೇನಾಧೀಶ್ವರನಾದ ಯೆಹೋವನಿಂದಲೇ ಉಂಟಾಗುತ್ತದೆ.
Kannada BSI Bible 2016
ಈ ವಿವೇಕವು ಸಹ ಅತಿಶಯಾಲೋಚನಾಪರನೂ ಕಾರ್ಯಸಾಧಕ ಜ್ಞಾನಶ್ರೇಷ್ಠನೂ ಆಗಿರುವ ಸೈನ್ಯಗಳ ಕರ್ತನಿಂದಲೇ ಹೊರಡುತ್ತದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಈ ವಿವೇಕವು ಸಹ ಅತಿಶಯಾಲೋಚನಾಪರನೂ ಸುಜ್ಞಾನಶ್ರೇಷ್ಠನೂ ಆಗಿರುವ ಸೇನಾಧೀಶ್ವರನಾದ ಯೆಹೋವನಿಂದಲೇ ಉಂಟಾಗುತ್ತದೆ.
Kannada Bible (KNCL) BSI 2016
ಈ ವಿವೇಕವು ಕೂಡ ಸೇನಾಧೀಶ್ವರ ಸರ್ವೇಶ್ವರನಿಂದಲೇ ಬರುತ್ತದೆ. ಅವರ ಆಲೋಚನೆ ಅತಿಶಯವಾದುದು. ಅವರ ಜ್ಞಾನ ಸರ್ವಶ್ರೇಷ್ಠವಾದುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈ ವಿವೇಕವು ಸಹ ಅತಿಶಯ ಆಲೋಚನಾಪರರೂ, ಕಾರ್ಯಸಾಧಕ ಜ್ಞಾನ ಶ್ರೇಷ್ಠರೂ ಆಗಿರುವ ಸೇನಾಧೀಶ್ವರ ಯೆಹೋವ ದೇವರಿಂದಲೇ ಹೊರಡುತ್ತದೆ.