Isaiah 28:4 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆ ನಗರವು ಬೆಟ್ಟದ ಮೇಲೆ ಕುಳಿತಿದೆ; ಸುತ್ತಲೂ ಫಲವತ್ತಾದ ಕಣಿವೆ ಇದೆ. ಆ ಸುಂದರವಾದ ಪುಷ್ಪ ಕಿರೀಟವು ಕೇವಲ ಒಣಗಿದ ತರಗೆಲೆ. ಆ ನಗರವು ಬೇಸಿಗೆಯ ಮೊದಲಿನ (ಅಂಜೂರದ) ಹಣ್ಣುಗಳಂತೆ ಇದೆ. ಅದನ್ನು ನೋಡಿದವರು ಕೂಡಲೇ ತೆಗೆದುಕೊಂಡು ಬಾಯಿಗೆ ಹಾಕಿಕೊಳ್ಳುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಫಲವತ್ತಾದ ಕಣಿವೆಗೆ ಶ್ರೇಷ್ಠ ಶಿರೋಭೂಷಣವಾಗಿದ್ದು ಬಾಡುತ್ತಿರುವ ಹೂವು ಫಲಕೊಡುವ ಕಾಲಕ್ಕೆ, ಮೊದಲು ಮಾಗಿದ ಅಂಜೂರಕ್ಕೆ ಸಮಾನವಾಗುವುದು; ಆ ಹಣ್ಣನ್ನು ನೋಡಿದವನು, ಅದನ್ನು ಕಿತ್ತ ಕೂಡಲೆ ನುಂಗಿಬಿಡುವನು.
Kannada BSI Bible 2016
ಫಲವತ್ತಾದ ತಗ್ಗಿನ ತಲೆಯ ಮೇಲಿರುವ ಬಾಡುವ ಹೂವಾದ ಅವರ ಅಲಂಕಾರದ ಶೃಂಗಾರವುಬೇಸಿಗೆ ಮುಂಚೆ ಹುಟ್ಟಿದ ಹಣ್ಣಿನ ಹಾಗೆ ಇರುವದು. ಅದನ್ನು ಕಂಡು ನೋಡಿದಾಕ್ಷಣವೇ ಕೈಗೆ ಸಿಕ್ಕಿದಾಗಲೇ ತಿಂದು ಬಿಡುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಫಲವತ್ತಾದ ತಗ್ಗಿಗೆ ಶ್ರೇಷ್ಠ ಶಿರೋಭೂಷಣವಾಗಿದ್ದು ಬಾಡುತ್ತಿರುವ ಹೂವು ಫಲಕಾಲಕ್ಕೆ ಮುಂಚೆ ಮಾಗಿದ ಅಂಜೂರಕ್ಕೆ ಸಮಾನವಾಗುವದು; ಆ ಹಣ್ಣನ್ನು ಕಂಡವನು ಕಿತ್ತ ಕೂಡಲೆ ನುಂಗಿಬಿಡುವನಲ್ಲವೆ.
Kannada Bible (KNCL) BSI 2016
ಫಲವತ್ತಾದ ಕಣಿವೆಗೆ ಶ್ರೇಷ್ಠಶಿರೋಭೂಷಣವಾಗಿದ್ದು, ಈಗ ಬಾಡುತ್ತಿರುವ ಆ ನಗರ, ಹೂ ಕಾಲಕ್ಕೆ ಮುಂಚೆ ಮಾಗಿದ ಅಂಜೂರಕ್ಕೆ ಸಮಾನವಾಗುವುದು. ಆ ಹಣ್ಣನ್ನು ಕಂಡವರು ಕಿತ್ತ ಕೂಡಲೆ ತಿಂದುಬಿಡುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಫಲವತ್ತಾದ ಕಣಿವೆಗೆ ತಲೆಯ ಮೇಲಿರುವ ಅಲಂಕಾರದ ಶೃಂಗಾರವಾಗಿದ್ದು, ಬೇಸಿಗೆ ಮುಂಚೆ ಮಾಗಿದ ಅಂಜೂರದ ಹಣ್ಣಿನ ಹಾಗೆ ಇರುವುದು. ಜನರು ಅವರನ್ನು ನೋಡಿ ಕೈಗೆ ತೆಗೆದುಕೊಂಡ ತಕ್ಷಣ ಅವರು ನುಂಗುತ್ತಾರೆ.