Isaiah 29:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನೀನು ಸೋತುಹೋಗಿರುವೆ ಮತ್ತು ನೆಲದ ಮೇಲೆ ಕೆಡವಲ್ಪಟ್ಟಿರುವೆ. ಈಗ ನಿನ್ನ ಸ್ವರವು ಪ್ರೇತದ ಸ್ವರದಂತೆ ನನಗೆ ಕೇಳಿಸುತ್ತದೆ. ಅದು ಬಲಹೀನವಾದ ಸ್ವರವಾಗಿದೆ.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು ಕುಗ್ಗಿ ಭೂಮಿಯೊಳಗಿಂದ ಮಾತನಾಡುವಿ, ನಿನ್ನ ನುಡಿಯು ಮಣ್ಣಿನೊಳಗಿಂದ ಸಣ್ಣ ಸ್ವರವಾಗಿ ಹೊರಡುವುದು, ನಿನ್ನ ಧ್ವನಿಯು ಪ್ರೇತದ ಧ್ವನಿಯಂತೆ ನೆಲದೊಳಗಿಂದ ಬರುವುದು, ನಿನ್ನ ನುಡಿಯು ಧೂಳಿನೊಳಗಿಂದ ಪಿಸುಗುಟ್ಟುವುದು.
Kannada BSI Bible 2016
ಆಗ ನೀನು ತಗ್ಗಿಸಲ್ಪಟ್ಟು ಭೂಮಿಯೊಳಗಿಂದ ಮಾತಾಡುವಿ. ನಿನ್ನ ನುಡಿಯು ದೂಳಿನೊಳಗಿಂದ ಸಣ್ಣ ಸ್ವರವಾಗಿ ಹೊರಡುವದು, ನಿನ್ನ ಸ್ವರವು ಭೂತದ ಹಾಗೆ ನೆಲದೊಳಗಿಂದ ಬರು ವದು; ನಿನ್ನ ನುಡಿಯು ದೂಳಿನೊಳಗಿಂದ ಪಿಸುಗುಟ್ಟು ವದು;
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ಕುಗ್ಗಿ ಭೂವಿುಯೊಳಗಿಂದ ಮಾತಾಡುವಿ, ನಿನ್ನ ನುಡಿಯು ಮಣ್ಣಿನೊಳಗಿಂದ ಸಣ್ಣಸ್ವರವಾಗಿ ಹೊರಡುವದು. ನಿನ್ನ ಧ್ವನಿಯು ಪ್ರೇತದ ಧ್ವನಿಯಂತೆ ನೆಲದೊಳಗಿಂದ ಬರುವದು, ನಿನ್ನ ನುಡಿಯು ದೂಳಿನೊಳಗಿಂದ ಲೊಚಗುಟ್ಟುವದು.
Kannada Bible (KNCL) BSI 2016
ನೀನು ಕುಗ್ಗಿ ಭೂಮಿಯೊಳಗಿಂದ ಮಾತಾಡುವೆ. ನಿನ್ನ ನುಡಿ ಮಣ್ಣಿನೊಳಗಿಂದ ಶಿಥಿಲ ಸ್ವರವಾಗಿ ಹೊರಡುವುದು. ನಿನ್ನ ಧ್ವನಿ ಭೂತದ ಧ್ವನಿಯಂತೆ ನೆಲದೊಳಗಿಂದ ಬರುವುದು. ಧೂಳಿನೊಳಗಿಂದ ನಿನ್ನ ಮಾತು ಲೊಚಗುಟ್ಟುವಂತೆ ಕೇಳಿಸುವುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ನೀನು ಕುಗ್ಗಿ ಭೂಮಿಯೊಳಗಿಂದ ಮಾತನಾಡುವಿ. ನಿನ್ನ ನುಡಿಯು ಧೂಳಿನೊಳಗಿಂದ ಸಣ್ಣ ಸ್ವರವಾಗಿ ಹೊರಡುವುದು. ನಿನ್ನ ಸ್ವರವು ಭೂತದ ಹಾಗೆ ನೆಲದೊಳಗಿಂದ ಬರುವುದು. ನಿನ್ನ ನುಡಿಯು ಧೂಳಿನೊಳಗಿಂದ ಪಿಸುಗುಟ್ಟುವುದು.