Isaiah 3:9 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಜನರ ಮುಖಭಾವವೇ ಅವರ ದುಷ್ಕೃತ್ಯಗಳನ್ನು ಎತ್ತಿತೋರಿಸುವವು. ಅವರು ತಮ್ಮ ಪಾಪಗಳಿಗಾಗಿ ಹೆಚ್ಚಳಪಡುವರು. ಅವರು ಸೊದೋಮಿನ ಜನರಂತಿದ್ದಾರೆ. ತಮ್ಮ ಪಾಪಗಳನ್ನು ಯಾರು ನೋಡಿದರೂ ಅವರಿಗೆ ಚಿಂತೆಯಿಲ್ಲ. ಇದು ನಿಜವಾಗಿಯೂ ಭಯಂಕರವಾದದ್ದು. ಅವರು ತಮಗೆ ಬಹಳ ಸಂಕಟಗಳನ್ನು ಬರಮಾಡಿಕೊಂಡಿದ್ದಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರ ಮುಖಭಾವವೇ ಅವರಿಗೆ ವಿರುದ್ಧ ಸಾಕ್ಷಿಯಾಗಿದೆ. ತಮ್ಮ ಪಾಪವನ್ನು ಮರೆಮಾಡದೇ ಸೊದೋಮಿನವರಂತೆ ಪ್ರಕಟಿಸುತ್ತಾರೆ. ಅಯ್ಯೋ, ಅವರ ಆತ್ಮದ ಗತಿಯೇ! ತಮಗೆ ತಾವೇ ಕೇಡು ಮಾಡಿಕೊಂಡಿದ್ದಾರೆ.
Kannada BSI Bible 2016
ಅವರ ಮುಖಭಾವವೇ ಅವರಿಗೆ ವಿರುದ್ಧವಾಗಿ ಸಾಕ್ಷಿಯಾಗಿದೆ. ತಮ್ಮ ಪಾಪ ಗಳನ್ನು ಸೊದೋಮಿನವರಂತೆ ಮರೆಮಾಜದೆ ಪ್ರಕಟ ಮಾಡುತ್ತಾರೆ. ಅವರ ಆತ್ಮಕ್ಕೆ ಅಯ್ಯೋ! ತಮಗೆ ತಾವೇ ಕೇಡನ್ನು ಪ್ರತೀಕಾರವಾಗಿ ಮಾಡಿಕೊಂಡಿದ್ದಾರೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರ ಮುಖಭಾವವೇ ಅವರಿಗೆ ವಿರುದ್ಧ ಸಾಕ್ಷಿಯಾಗಿದೆ; ತಮ್ಮ ಪಾಪವನ್ನು ಮರೆಮಾಜದೆ ಸೊದೋವಿುನವರಂತೆ ಮೆರೆಯಿಸುತ್ತಾರೆ. ಅಯ್ಯೋ, ಅವರ ಆತ್ಮದ ಗತಿಯೇ! ತಮಗೆ ತಾವೇ ಕೇಡು ಮಾಡಿಕೊಂಡಿದ್ದಾರೆ.
Kannada Bible (KNCL) BSI 2016
ಅವರ ಮುಖಲಕ್ಷಣವೇ ಅವರ ವಿರುದ್ಧ ಸಾಕ್ಷಿಯಾಗಿದೆ. ಅವರು ಸೊದೋಮಿನವರಂತೆ ತಮ್ಮ ಪಾಪಗಳನ್ನು ಮುಚ್ಚುಮರೆಯಿಲ್ಲದೆ ಮೆರೆಯಿಸುತ್ತಾರೆ. ಅಯ್ಯೋ, ಅವರಿಗೆ ಕೇಡು! ತಮಗೆ ತಾವೇ ಕೇಡನ್ನು ಬರಮಾಡಿಕೊಂಡಿದ್ದಾರೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರ ಮುಖಭಾವವೇ ಅವರಿಗೆ ವಿರುದ್ಧವಾಗಿ ಸಾಕ್ಷಿಯಾಗಿದೆ. ತಮ್ಮ ಪಾಪವನ್ನು ಸೊದೋಮಿನಂತೆ ಮರೆಮಾಡದೆ ಪ್ರಕಟ ಮಾಡುತ್ತಾರೆ. ಅವರಿಗೆ ಕಷ್ಟ! ಏಕೆಂದರೆ ತಮಗೆ ತಾವೇ ಕೇಡನ್ನು ಪ್ರತೀಕಾರವಾಗಿ ಮಾಡಿಕೊಂಡಿದ್ದಾರೆ.