Isaiah 30:2 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಈ ಮಕ್ಕಳು ಈಜಿಪ್ಟಿಗೆ ಸಹಾಯಕ್ಕಾಗಿ ಹೋಗುತ್ತಾರೆ, ಆದರೆ ಅವರು ಹಾಗೆ ಮಾಡುವದು ಸರಿಯೋ ಎಂದು ನನ್ನ ಹತ್ತಿರ ಕೇಳುವದಿಲ್ಲ. ಫರೋಹನು ತಮ್ಮನ್ನು ರಕ್ಷಿಸುತ್ತಾನೆಂದು ಅವರು ತಿಳಿದಿದ್ದಾರೆ. ಈಜಿಪ್ಟೇ ತಮ್ಮನ್ನು ಕಾಪಾಡಬೇಕು ಎಂಬುದು ಅವರ ಇಷ್ಟ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಫರೋಹನ ಆಶ್ರಯವನ್ನು ಪಡೆದು, ಐಗುಪ್ತವನ್ನು ಆಶ್ರಯ ಮಾಡಿಕೊಳ್ಳಬೇಕೆಂದು, ನನ್ನ ಮಾತನ್ನು ಕೇಳದೆ ಐಗುಪ್ತಕ್ಕೆ ಪ್ರಯಾಣವಾಗಿ ಹೊರಟಿದ್ದಾರೆ.
Kannada BSI Bible 2016
ಫರೋಹನ ಬಲದಲ್ಲಿ ತಾವು ಬಲಗೊಳ್ಳುವ ಹಾಗೆ ಯೂ ಐಗುಪ್ತದ ನೆರಳಿನಲ್ಲಿ ಭರವಸವಿಟ್ಟು ನನ್ನ ಮಾತನ್ನು ಕೇಳದೆ ಐಗುಪ್ತಕ್ಕೆ ಪ್ರಯಾಣವಾಗಿ ಹೊರಟಿ ದ್ದಾರೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಫರೋಹನ ಆಶ್ರಯವನ್ನು ಪಡೆದು ಐಗುಪ್ತವನ್ನು ಮರೆಹೊಗಬೇಕೆಂದು ನನ್ನ ಮಾತನ್ನು ಕೇಳದೆ ಐಗುಪ್ತಕ್ಕೆ ಪ್ರಯಾಣವಾಗಿ ಹೊರಟಿದ್ದಾರೆ.
Kannada Bible (KNCL) BSI 2016
ನನ್ನ ಸಲಹೆಯನ್ನು ಕೇಳದೆ ಈಜಿಪ್ಟಿಗೆ ಪ್ರಯಾಣ ಬೆಳೆಸಿದ್ದಾರೆ. ಫರೋಹನ ಆಶ್ರಯವನ್ನು ಬಯಸುತ್ತಾರೆ. ಈಜಿಪ್ಟಿನವರನ್ನು ಮರೆಹೋಗಬೇಕೆಂದಿದ್ದಾರೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಫರೋಹನಲ್ಲಿ ತಾವು ಬಲಗೊಳ್ಳುವ ಆಶ್ರಯವನ್ನು ಈಜಿಪ್ಟಿನ ನೆರಳಿನಲ್ಲಿ ಭರವಸವಿಡಬೇಕೆಂದು ನನ್ನ ಮಾತನ್ನು ಕೇಳದೆ, ಈಜಿಪ್ಟಿಗೆ ಪ್ರಯಾಣವಾಗಿ ಹೊರಟಿದ್ದಾರೆ.