Isaiah 31:9 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವರ ಸುರಕ್ಷತೆಯ ಸ್ಥಳ ನಾಶವಾಗುವದು. ಅವರ ಅಧಿಪತಿಗಳು ಧ್ವಜವನ್ನು ಬಿಟ್ಟು ಸೋತುಹೋಗುವರು. ಯೆಹೋವನೇ ಇದನ್ನು ನುಡಿದಿದ್ದಾನೆ. ಆತನ ಅಗ್ನಿವೇದಿಕೆಯು ಚೀಯೋನಿನಲ್ಲಿದೆ. ಆತನ ಒಲೆಯು ಜೆರುಸಲೇಮಿನಲ್ಲಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಭಯದಿಂದ ತಮ್ಮ ಭರವಸೆಯನ್ನು ಕಳೆದುಕೊಳ್ಳುವರು. ಅವರ ಪ್ರಧಾನರು ಹೆದರಿ ಧ್ವಜಸ್ಥಾನದಿಂದ ದಿಕ್ಕಾಪಾಲಾಗುವರು” ಚೀಯೋನಿನಲ್ಲಿ ಅಗ್ನಿಯನ್ನೂ, ಯೆರೂಸಲೇಮಿನಲ್ಲಿ ಕುಲುಮೆಯನ್ನೂ ಮಾಡಿಕೊಂಡಿರುವ ಯೆಹೋವನ ನುಡಿ ಇದೇ.
Kannada BSI Bible 2016
ಅವನು ಅಂಜಿಕೆಯಿಂದ ತನ್ನ ತ್ರಾಣಸ್ಥಾನಕ್ಕೆ ದಾಟಿಹೋಗು ವನು; ಅವನ ಪ್ರಧಾನರು ಧ್ವಜಕ್ಕೆ ಹೆದರಿಓಡು ವರು; ಚೀಯೋನಿನಲ್ಲಿ ಅಗ್ನಿಯನ್ನೂ ಯೆರೂಸಲೇಮಿ ನಲ್ಲಿ ಕುಲುಮೆಯನ್ನೂ ಮಾಡಿಕೊಂಡಿರುವ ಕರ್ತನ ನುಡಿ ಇದೇ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರ ಶರಣನು ಭಯದಿಂದ ಹೋಗಿಬಿಡುವನು; ಅವರ ಪ್ರಧಾನರು ಹೆದರಿ ಧ್ವಜಸ್ಥಾನದಿಂದ ದಿಕ್ಕಾಪಾಲಾಗುವರು. ಚೀಯೋನಿನಲ್ಲಿ ಅಗ್ನಿಯನ್ನೂ ಯೆರೂಸಲೇವಿುನಲ್ಲಿ ಒಲೆಯನ್ನೂ ಮಾಡಿಕೊಂಡಿರುವ ಯೆಹೋವನ ನುಡಿ ಇದೇ.
Kannada Bible (KNCL) BSI 2016
ಅವರಿಗೆ ಆಶ್ರಯ ನೀಡಿದವನು, ಭಯದಿಂದ ಪಲಾಯನ ಮಾಡಿಬಿಡುವನು, ಅವರ ದಳಪತಿಗಳು ಧ್ವಜವನ್ನೇ ಬಿಟ್ಟು ದಿಕ್ಕುಪಾಲಾಗುವರು.” ಇದು ಸರ್ವೇಶ್ವರ ಸ್ವಾಮಿಯ ನುಡಿ. ಪ್ರಭುವಿನ ಅಗ್ನಿ ಇರುವುದು ಸಿಯೋನಿನಲ್ಲಿ, ಅವರ ಅಗ್ನಿಕುಂಡ ಜೆರುಸಲೇಮಿನಲ್ಲಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಭಯಾನಕತೆಯಿಂದ ಅವರ ಕೋಟೆ ಬೀಳುವುದು, ಯುದ್ಧದ ದೃಶ್ಯವನ್ನು ನೋಡಿ ಅವರ ಸೇನಾಪತಿಗಳು ಧ್ವಜಸ್ಥಾನದಿಂದ ದಿಕ್ಕುಪಾಲಾಗುವರು. ಚೀಯೋನಿನಲ್ಲಿ ಅಗ್ನಿಯನ್ನೂ, ಯೆರೂಸಲೇಮಿನಲ್ಲಿ ಕುಲುಮೆಯನ್ನೂ ಮಾಡಿಕೊಂಡಿರುವ ಯೆಹೋವ ದೇವರು ಘೋಷಿಸುತ್ತಾರೆ.