Isaiah 34:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಕಾಡುಬೆಕ್ಕುಗಳು ಮತ್ತು ಕತ್ತೆಕಿರುಬಗಳು ಅಲ್ಲಿ ವಾಸಮಾಡುವವು. ಕಾಡುಹೋತಗಳು ತಮ್ಮ ಸ್ನೇಹಿತರನ್ನು ಕರೆಯುವವು. ರಾತ್ರಿಪ್ರಾಣಿಗಳು ಅಲ್ಲಿ ವಿಶ್ರಮಿಸಿಕೊಳ್ಳುವವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕಾಡುಮೃಗಗಳು ಮತ್ತು ನರಿಗಳು ಅಲ್ಲಿ ಸಂಧಿಸುವವು, ಕಾಡಿನ ಆಡುಗಳು ತನ್ನ ಜೊತೆಯನ್ನು ಕೂಗುವುದು, ಭೂತ ಪ್ರೇತಗಳು ಅಲ್ಲಿ ಹಾಯಾಗಿ ವಿಶ್ರಮಿಸಿಕೊಂಡು, ಆಸರೆಯನ್ನು ಕಂಡುಕೊಳ್ಳುವುದು.
Kannada BSI Bible 2016
ಮರುಭೂಮಿಯ ಕಾಡು ಮೃಗಗಳು ಸಹ ದ್ವೀಪದ ಕಾಡುಮೃಗಗಳೊಂದಿಗೆ ಸಂಧಿಸುವವು; ದೆವ್ವವು ತನ್ನ ಜೊತೆಯನ್ನು ಕೂಗು ವದು; ಅಲ್ಲಿ ಚೀರುಗೂಬೆಯು ಸಹ ವಿಶ್ರಮಿಸಿಕೊಂಡು ಉಪಶಮನ ಸ್ಥಳವನ್ನು ಕಂಡುಕೊಳ್ಳುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕಾಡು ನಾಯಿ ತೋಳಗಳು ಅಲ್ಲಿ ಸಂಧಿಸುವವು, ದೆವ್ವವು ತನ್ನ ಜೊತೆಯನ್ನು ಕೂಗುವದು, ಬೇತಾಳವು ಅಲ್ಲಿ ಹಾಯಾಗಿ ಆಸರೆಗೊಳ್ಳುವದು.
Kannada Bible (KNCL) BSI 2016
ಕಾಡುನಾಯಿಗಳೂ ತೋಳಗಳೂ ಅಲ್ಲಿ ಸೇರುವುವು; ಕಾಡುಮೇಕೆ ತನ್ನ ಜೊತೆ ಮೇಕೆಯನ್ನು ಕರೆದು ಕೂಗುವುದು; ಭೂತಪ್ರೇತಗಳು ಅಲ್ಲಿ ಹಾಯಾಗಿ ವಾಸಮಾಡುವುವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮರುಭೂಮಿಯ ಕಾಡುಮೃಗಗಳು ತೋಳಗಳೊಂದಿಗೆ ಸಂಧಿಸುವುವು, ಕಾಡುಮೇಕೆಗಳು ಪರಸ್ಪರ ಕರೆಯುತ್ತವೆ. ರಾತ್ರಿ ಮೃಗಗಳು ಸಹ ಅಲ್ಲಿ ಮಲಗುತ್ತವೆ. ತಮಗಾಗಿ ವಿಶ್ರಾಂತಿ ಸ್ಥಳಗಳನ್ನು ಕಂಡುಕೊಳ್ಳುತ್ತವೆ.