Isaiah 34:17 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವುಗಳಿಗೆ ಮಾಡತಕ್ಕದ್ದನ್ನು ದೇವರು ತೀರ್ಮಾನಿಸಿದ್ದಾನೆ. ಆತನು ಅವುಗಳಿಗೆ ಒಂದು ಸ್ಥಳವನ್ನು ಆರಿಸಿದ್ದಾನೆ. ಆತನು ಮೇರೆಯನ್ನು ನಿರ್ಮಿಸಿ ಅವುಗಳ ದೇಶವನ್ನು ತೋರಿಸಿದ್ದಾನೆ. ಹೀಗೆ ಆ ಪ್ರಾಣಿಗಳು ದೇಶವನ್ನು ನಿತ್ಯಕಾಲಕ್ಕೂ ತಮ್ಮದಾಗಿ ಮಾಡಿಕೊಳ್ಳುವವು. ವರ್ಷವರ್ಷವೂ ಅವುಗಳು ಅಲ್ಲಿಯೇ ವಾಸಮಾಡುವವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆತನೇ ಇವುಗಳಿಗೆ ಪಾಲು ಮಾಡಿಕೊಟ್ಟಿದ್ದಾನೆ. ಆತನ ಕೈಯೇ ಗೆರೆ ಹಾಕಿ ದೇಶವನ್ನು ಹಂಚಿಕೊಟ್ಟಿದೆ. ಅದು ಇವುಗಳಿಗೆ ನಿತ್ಯ ಸ್ವಾಸ್ತ್ಯವಾಗುವುದು, ಅವು ತಲಾತಲಾಂತರಕ್ಕೂ ಅದರಲ್ಲಿ ವಾಸವಾಗಿರುವವು.
Kannada BSI Bible 2016
ಆತನೇ ಅವುಗಳಿಗೋಸ್ಕರ ಚೀಟು ಹಾಕಿದ್ದಾನೆ, ಆತನ ಕೈಯೇ ಅದನ್ನು ಗೆರೆ ಎಳೆದು ಅವರಿಗೆ ಹಂಚಿ ಕೊಟ್ಟಿದೆ. ಅವು ಅದನ್ನು ನಿರಂತರಕ್ಕೂ ವಶಮಾಡಿ ಕೊಳ್ಳುವವು. ಅವು ತಲತಲಾಂತರಕ್ಕೂ ಅದರಲ್ಲಿ ವಾಸವಾಗಿರುವವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆತನೇ ಇವುಗಳಿಗೆ ಪಾಲುಮಾಡಿಕೊಟ್ಟಿದ್ದಾನೆ, ಆತನ ಕೈಯೇ ನೂಲುಹಾಕಿ ದೇಶವನ್ನು ಹಂಚಿದೆ; ಅದು ಇವುಗಳಿಗೆ ನಿತ್ಯಸ್ವಾಸ್ತ್ಯವಾಗುವದು, ಅವು ತಲತಲಾಂತರಕ್ಕೂ ಅಲ್ಲಿ ವಾಸಿಸುವವು.
Kannada Bible (KNCL) BSI 2016
ಅವರೇ, ಇವುಗಳಿಗೆ ಹಂಚಿಕೊಟ್ಟಿದ್ದಾರೆ, ಅವರ ಕೈಯೇ ನೂಲುಹಿಡಿದು ನಾಡನ್ನು ಇವುಗಳಿಗೆ ವಿಭಾಗಮಾಡಿದೆ; ಅದು ಇವುಗಳಿಗೆ ಶಾಶ್ವತ ಸೊತ್ತಾಗುವುದು, ತಲತಲಾಂತರಕ್ಕೂ ಅವು ಅಲ್ಲಿ ವಾಸಮಾಡುವುವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರೇ ಅವುಗಳಿಗೋಸ್ಕರ ಚೀಟು ಹಾಕಿದ್ದಾರೆ. ಅವರ ಕೈಯೇ ಅದನ್ನು ಗೆರೆ ಎಳೆದು, ಅವರಿಗೆ ಹಂಚಿಕೊಟ್ಟಿದೆ. ಅವು ಅದನ್ನು ನಿರಂತರಕ್ಕೂ ವಶಮಾಡಿಕೊಳ್ಳುವುವು. ಅವು ತಲತಲಾಂತರಕ್ಕೂ ಅದರಲ್ಲಿ ವಾಸವಾಗಿರುವುವು.