Isaiah 37:24 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನನ್ನ ಒಡೆಯನಾದ ಯೆಹೋವನನ್ನು ತುಚ್ಛೀಕರಿಸಲಿಕ್ಕೆ ನೀನು ನಿನ್ನ ಅಧಿಕಾರಿಯನ್ನು ಕಳುಹಿಸಿದೆ. “ನನ್ನಲ್ಲಿ ಬಲ ಸಾಮರ್ಥ್ಯಗಳಿವೆ; ನನ್ನಲ್ಲಿ ಅನೇಕಾನೇಕ ರಥಗಳಿವೆ. ನನ್ನ ಬಲದಿಂದ ನಾನು ಲೆಬನೋನನ್ನು ಸೋಲಿಸಿದೆ. ಲೆಬನೋನಿನ ಉನ್ನತ ಶಿಖರಗಳನ್ನು ನಾನು ಏರಿದೆನು. ಲೆಬನೋನಿನ ಎತ್ತರವಾದ ದೇವದಾರು ಮರಗಳನ್ನೂ ಶ್ರೇಷ್ಠವಾದ ತುರಾಯಿ ಮರಗಳನ್ನೂ (ಸೈನ್ಯ) ನಾನು ಕಡಿದುಹಾಕಿದೆನು. ನಾನು ಅತ್ಯುನ್ನತ ಶಿಖರಕ್ಕೂ ದಟ್ಟವಾದ ಕಾಡಿನೊಳಗೂ ಹೋಗಿದ್ದೇನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು ನಿನ್ನ ಸೇವಕರ ಮುಖಾಂತರವಾಗಿ ಕರ್ತನನ್ನು ನಿಂದಿಸಿ, ‘ನನ್ನ ರಥಸಮೂಹದೊಡನೆ ಪರ್ವತಶಿಖರಗಳನ್ನು ಹತ್ತಿದ್ದೇನೆ. ಲೆಬನೋನಿನ ದುರ್ಗಮಸ್ಥಳಗಳಿಗೆ ಹೋಗಿದ್ದೇನೆ; ಅದರ ಎತ್ತರವಾದ ದೇವದಾರು ವೃಕ್ಷಗಳನ್ನೂ, ಶ್ರೇಷ್ಠವಾದ ತುರಾಯಿ ಮರಗಳನ್ನೂ ಕಡಿದು ಬಿಟ್ಟಿದ್ದೇನೆ; ಅಲ್ಲಿನ ಬಹುದೂರದ ಶಿಖರವನ್ನೂ, ಉದ್ಯಾನವನಗಳನ್ನೂ ಪ್ರವೇಶಿಸಿದ್ದೇನೆ.
Kannada BSI Bible 2016
ನೀನು ನಿನ್ನ ಸೇವಕರ ಮುಖಾಂತರವಾಗಿ ಕರ್ತನನ್ನು ನಿಂದಿಸಿ--ನನ್ನ ರಥಸಮೂಹದೊಡನೆ ಪರ್ವತ ಶಿಖರಗಳನ್ನು ಹತ್ತಿದ್ದೇನೆ; ಲೆಬನೋನಿನ ಭಾಗಗಳಿಗೆ ಹೋಗಿದ್ದೇನೆ; ಅದರ ಎತ್ತರವಾದ ದೇವದಾರು, ಶ್ರೇಷ್ಠವಾದ ತುರಾಯಿ ಮರಗಳನ್ನು ಕಡಿದುಬಿಟ್ಟಿದ್ದೇನೆ; ಅಂಚಿನ ಉನ್ನತವಾದ ಸ್ಥಳವನ್ನೂ ಮತ್ತು ಅದರ ಕರ್ಮೇಲಿನ ಅಡವಿಯನ್ನೂ ಪ್ರವೇಶಿಸಿದ್ದೇನೆ;
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ನಿನ್ನ ಸೇವಕರ ಮುಖಾಂತರವಾಗಿ ಕರ್ತನನ್ನು ನಿಂದಿಸಿ - ನನ್ನ ರಥಸಮೂಹದೊಡನೆ ಪರ್ವತಶಿಖರಗಳನ್ನು ಹತ್ತಿದ್ದೇನೆ; ಲೆಬನೋನಿನ ದುರ್ಗಮಸ್ಥಳಗಳಿಗೆ ಹೋಗಿದ್ದೇನೆ; ಅದರ ಎತ್ತರವಾದ ದೇವದಾರು ವೃಕ್ಷಗಳನ್ನೂ ಶ್ರೇಷ್ಠವಾದ ತುರಾಯಿ ಮರಗಳನ್ನೂ ಕಡಿದು ಬಿಟ್ಟಿದ್ದೇನೆ; ಅಲ್ಲಿನ ಬಹುದೂರದ ಶಿಖರವನ್ನೂ ಉದ್ಯಾನವನಗಳನ್ನೂ ಪ್ರವೇಶಿಸಿದ್ದೇನೆ;
Kannada Bible (KNCL) BSI 2016
ನೀನು ನಿನ್ನ ಸೇವಕರ ಮೂಲಕ ಸರ್ವೇಶ್ವರನನ್ನು ನಿಂದಿಸಿರುವೆ. ಅಲ್ಲದೆ, ಈ ಮಾತುಗಳನ್ನಾಡಿ ಜಂಬಕೊಚ್ಚಿಕೊಂಡಿರುವೆ: ‘ಹತ್ತಿದ್ದೇನೆ ಗಿರಿಶಿಖರಗಳನ್ನು ರಥಸಮೂಹದೊಡನೆ ಸೇರಿದ್ದೇನೆ ಲೆಬನೋನಿನ ದುರ್ಗಮ ಸ್ಥಳಗಳನ್ನೇ. ಕಡಿದಿದ್ದೇನೆ ಅದರ ಎತ್ತರವಾದ ದೇವದಾರು ವೃಕ್ಷಗಳನ್ನೇ, ಕತ್ತರಿಸಿದ್ದೇನೆ ಅದರ ಶ್ರೇಷ್ಠವಾದ ತುರಾಯಿ ಮರಗಳನ್ನೇ. ಒಳಹೊಕ್ಕಿದ್ದೇನೆ ಅಲ್ಲಿನ ದೂರದ ಶಿಖರವನ್ನೇ, ಪ್ರವೇಶಿಸಿದ್ದೇನೆ ದಟ್ಟವಾದ ಆ ಕಾಡುಮೇಡುಗಳನ್ನೇ
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀನು ನಿನ್ನ ದೂತರ ಮುಖಾಂತರ ಯೆಹೋವ ದೇವರನ್ನು ನಿಂದಿಸಿರುವೆ. ಇದಲ್ಲದೆ ನೀನು, ‘ನಾನು ನನ್ನ ರಥಸಮೂಹದೊಡನೆ ಪರ್ವತಗಳ ಶಿಖರಗಳನ್ನು ಹತ್ತಿದ್ದೇನೆ. ಲೆಬನೋನಿನ ಎತ್ತರಗಳಿಗೆ ಹೋಗಿದ್ದೇನೆ. ಅದರ ಉನ್ನತವಾದ ದೇವದಾರುಗಳನ್ನೂ ಅತ್ಯುತ್ತಮ ತುರಾಯಿ ಮರಗಳನ್ನೂ ಕಡಿದುಹಾಕಿದ್ದೇನೆ. ಅದರ ಅಂಚಿನ ಉನ್ನತವಾದ ಸ್ಥಳವನ್ನೂ, ಅದರ ಫಲಭರಿತ ಅಡವಿಯಲ್ಲಿಯೂ ಪ್ರವೇಶಿಸಿದ್ದೇನೆ.