Isaiah 37:33 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದ್ದರಿಂದ ಯೆಹೋವನು ಅಶ್ಶೂರದ ಅರಸನ ಬಗ್ಗೆ ಹೇಳುವನು: “ಅವನು ಈ ಪಟ್ಟಣದೊಳಗೆ ಬರುವದಿಲ್ಲ. ಅವನು ಒಂದು ಬಾಣವನ್ನೂ ಈ ಪಟ್ಟಣದ ಮೇಲೆ ಹಾರಿಸುವದಿಲ್ಲ. ಅವನು ತನ್ನ ಗುರಾಣಿಗಳನ್ನು ಈ ಪಟ್ಟಣಕ್ಕೆ ತರುವದಿಲ್ಲ. ಈ ಪಟ್ಟಣದ ಗೋಡೆಗಳ ಮೇಲೆ ಆಕ್ರಮಣಮಾಡಲು ಅವನು ದಿಬ್ಬ ಹಾಕುವದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆತನು ಅಶ್ಶೂರದ ಅರಸನನ್ನು ಕುರಿತು, “ಅವನು ಪಟ್ಟಣವನ್ನು ಸಮೀಪಿಸುವುದಿಲ್ಲ, ಅದಕ್ಕೆ ಬಾಣವನ್ನೆಸೆಯುವುದಿಲ್ಲ, ಗುರಾಣಿ ಹಿಡಿದಿರುವವರನ್ನು ಕಳುಹಿಸುವುದಿಲ್ಲ, ಅದನ್ನು ಕೆಡವಿ ಬಿಡುವುದಕ್ಕೋಸ್ಕರ ಅದರ ಎದುರಾಗಿ ಮಣ್ಣಿನ ದಿಬ್ಬವನ್ನು ಮಾಡುವುದಿಲ್ಲ.
Kannada BSI Bible 2016
ಆದದರಿಂದ ಕರ್ತನು ಅಶ್ಶೂರದ ಅರಸನ ವಿಷಯವಾಗಿ ಹೇಳುವ ದೇನಂದರೆ ಅವನು ಈ ಪಟ್ಟಣಕ್ಕೆ ಬರಲಾರನು ಬಾಣವನ್ನು ಎಸೆಯನು, ಇಲ್ಲವೇ ಅದರ ಮುಂದೆ ಗುರಾಣಿಯೊಂದಿಗೆ ಬರಲಾರನು ಇಲ್ಲವೆ ಅದಕ್ಕೆ ವಿರೋಧವಾಗಿ ಮಣ್ಣಿನ ದಿಬ್ಬವನ್ನು ಹಾಕುವದಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆತನು ಅಶ್ಶೂರದ ಅರಸನನ್ನು ಕುರಿತು - ಅವನು ಪಟ್ಟಣವನ್ನು ಸಮೀಪಿಸುವದಿಲ್ಲ, ಅದಕ್ಕೆ ಬಾಣವನ್ನೆಸೆಯುವದಿಲ್ಲ, ಗುರಾಣಿ ಹಿಡಿದಿರುವವರನ್ನು ಕಳುಹಿಸುವದಿಲ್ಲ, ಅದನ್ನು ಕೆಡವಿಬಿಡುವದಕ್ಕೋಸ್ಕರ ಅದರ ಎದುರಾಗಿ ಮಣ್ಣಿನ ದಿಬ್ಬವನ್ನು ಮಾಡುವದಿಲ್ಲ.
Kannada Bible (KNCL) BSI 2016
“ಅಸ್ಸೀರಿಯದ ಅರಸನನ್ನು ಕುರಿತು ಸರ್ವೇಶ್ವರ ಹೇಳಿರುವ ಮಾತಿದು - ಅವನು ಪಟ್ಟಣವನ್ನು ಸಮೀಪಿಸುವುದಿಲ್ಲ, ಅದರತ್ತ ಬಾಣವನ್ನೆಸೆಯುವುದಿಲ್ಲ, ಕವಚಧಾರಿಗಳನ್ನು ಕಳುಹಿಸುವುದಿಲ್ಲ. ಅದರ ಆಕ್ರಮಣಕ್ಕಾಗಿ ಮಣ್ಣುದಿಬ್ಬಗಳನ್ನು ಎಬ್ಬಿಸುವುದಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಆದ್ದರಿಂದ ಯೆಹೋವ ದೇವರು ಅಸ್ಸೀರಿಯದ ಅರಸನನ್ನು ಕುರಿತು ಹೀಗೆ ಹೇಳುತ್ತಾರೆ: “ಅವನು ಈ ಪಟ್ಟಣದೊಳಗೆ ಬರುವುದಿಲ್ಲ. ಅಲ್ಲಿ ಬಾಣವನ್ನು ಎಸೆಯುವುದಿಲ್ಲ. ಗುರಾಣಿಯೊಂದಿಗೆ ಅದರ ಮುಂದೆ ಬರಲಾರನು. ಅದಕ್ಕೆ ವಿರೋಧವಾಗಿ ಮುತ್ತಿಗೆ ಹಾಕಲು ದಿಬ್ಬವನ್ನು ನಿರ್ಮಿಸುವುದಿಲ್ಲ.