Isaiah 39:7 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಬಾಬಿಲೋನಿನವರು ನಿನ್ನ ಗಂಡುಮಕ್ಕಳನ್ನು ತೆಗೆದುಕೊಂಡು ಹೋಗುವರು. ಅವರು ಬಾಬಿಲೋನಿನ ಅರಮನೆಗಳಲ್ಲಿ ಕಂಚುಕಿಯರಾಗಿ ಸೇವೆ ಮಾಡುವರು” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಬಾಬೆಲಿನ ಅರಸನು ಬಂದು, ನೀನು ಪಡೆದ ಮಕ್ಕಳನ್ನು ತೆಗೆದುಕೊಂಡು ಹೋಗಿ ಅವರನ್ನು ತಮ್ಮ ಅರಮನೆಯಲ್ಲಿ ಕಂಚುಕಿಗಳನ್ನಾಗಿ ನೇಮಿಸಿಕೊಳ್ಳುವರು ಅನ್ನುತ್ತಾನೆ” ಎಂದು ಹೇಳಿದನು.
Kannada BSI Bible 2016
ನಿನ್ನಿಂದ ಹುಟ್ಟುವಂಥ ನೀನು ಪಡೆದ ನಿನ್ನ ಮಕ್ಕಳನ್ನು ತೆಗೆದು ಕೊಂಡು ಹೋಗುವರು; ಬಾಬೆಲಿನ ಅರಸನ ಅರಮನೆ ಯಲ್ಲಿ ಅವರು ಕಂಚುಕಿಗಳಾಗಿರುವರು ಎಂದು ಕರ್ತನು ಹೇಳುತ್ತಾನೆ ಅಂದನು.ಆಗ ಹಿಜ್ಕೀಯನು--ಹೇಗೂ ನನ್ನ (ದಿನಗಳಲ್ಲಿ) ಜೀವಮಾನ ದಲ್ಲಿ ಸಮಾಧಾನವು ಸತ್ಯವು ಇರುವವು ಎಂದು ಅಂದುಕೊಂಡು ಯೆಶಾಯ ನಿಗೆ--ನೀನು ಹೇಳಿದ ಕರ್ತನ ವಾಕ್ಯವು ಒಳ್ಳೇದೆ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಬಾಬೆಲಿನ ಅರಸರು ಬಂದು ನೀನು ಪಡೆದ ಮಕ್ಕಳನ್ನು ತೆಗೆದುಕೊಂಡು ಹೋಗಿ ಅವರನ್ನು ತಮ್ಮ ಅರಮನೆಯಲ್ಲಿ ಕಂಚುಕಿಗಳನ್ನಾಗಿ ನೇವಿುಸಿಕೊಳ್ಳುವರು ಅನ್ನುತ್ತಾನೆ ಎಂದು ಹೇಳಿದನು.
Kannada Bible (KNCL) BSI 2016
ನೀನು ಪಡೆದ ಮಕ್ಕಳಲ್ಲಿ ಕೆಲವರನ್ನು, ನಿನ್ನ ಸ್ವಂತ ಪುತ್ರರನ್ನು ತೆಗೆದುಕೊಂಡು ಹೋಗಿ ಬಾಬಿಲೋನಿಯರ ಅರಸರ ಅರಮನೆಯಲ್ಲಿ ಕಂಚುಕಿಗಳನ್ನಾಗಿ ನೇಮಿಸಿಕೊಳ್ಳುವರು,” ಎಂದು ಹೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬಾಬಿಲೋನಿನವರು ನಿನ್ನಿಂದ ಹುಟ್ಟುವಂಥ, ನಿನ್ನ ಮಕ್ಕಳಲ್ಲಿ ಕೆಲವರನ್ನು ತೆಗೆದುಕೊಂಡು ಹೋಗುವರು, ಅವರು ಬಾಬಿಲೋನಿನ ರಾಜನ ಅರಮನೆಯಲ್ಲಿ ಕಂಚುಕಿಗಳಾಗಿರುವರು,” ಎಂದನು.