Isaiah 42:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನು ಯುದ್ಧವೀರನಂತೆ ಹೊರಡುವನು. ಆತನು ಯುದ್ಧಮಾಡಲು ತಯಾರಾಗಿರುವ ಶೂರನಂತಿದ್ದಾನೆ. ಆತನು ಉತ್ಸಾಹದಿಂದ ಗಟ್ಟಿಯಾಗಿ ಕೂಗುತ್ತಾ ತನ್ನ ವೈರಿಗಳನ್ನು ಸೋಲಿಸುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನು ಶೂರನಂತೆ ಹೊರಟು, ಯುದ್ಧವೀರನ ಹಾಗೆ ತನ್ನ ರೌದ್ರವನ್ನು ಎಬ್ಬಿಸುವನು. ಆರ್ಭಟಿಸಿ ಗರ್ಜಿಸಿ ಶತ್ರುಗಳ ಮೇಲೆ ಬಿದ್ದು ತನ್ನ ಪರಾಕ್ರಮವನ್ನು ತೋರ್ಪಡಿಸುವನು.
Kannada BSI Bible 2016
ಕರ್ತನು ಪರಾಕ್ರಮ ಶಾಲಿಯಾಗಿ ಮುಂದೆ ಹೋಗುವನು; ಯುದ್ಧ ವೀರನ ಹಾಗೆ ತನ್ನ ರೌದ್ರವನ್ನು ಎಬ್ಬಿಸು ವನು; ತನ್ನ ಶತ್ರುಗಳಿಗೆ ವಿರೋಧವಾಗಿ ಜಯ ಶಾಲಿಯಾಗುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನು ಶೂರನಂತೆ ಹೊರಟು ಯುದ್ಧವೀರನ ಹಾಗೆ ತನ್ನ ರೌದ್ರವನ್ನು ಎಬ್ಬಿಸುವನು; ಆರ್ಭಟಿಸಿ ಗರ್ಜಿಸಿ ಶತ್ರುಗಳ ಮೇಲೆ ಬಿದ್ದು ತನ್ನ ಪರಾಕ್ರಮವನ್ನು ತೋರ್ಪಡಿಸುವನು.
Kannada Bible (KNCL) BSI 2016
ಸರ್ವೇಶ್ವರ ಹೊರಟಿರುವನು ಶೂರನಂತೆ ರೌದ್ರದಿಂದಿರುವನು ಯುದ್ಧವೀರನಂತೆ ಆರ್ಭಟಿಸಿ ಗರ್ಜಿಸುವನು ರಣಕಹಳೆಯಂತೆ ಶತ್ರುಗಳ ಮೇಲೆ ಬೀಳುವನು ಪರಾಕ್ರಮಿಯಂತೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರು ಪರಾಕ್ರಮಶಾಲಿಯಾಗಿ ಮುಂದೆ ಹೋಗುವರು; ಯುದ್ಧವೀರನ ಹಾಗೆ ತಮ್ಮ ರೌದ್ರವನ್ನು ಎಬ್ಬಿಸುವರು. ಆರ್ಭಟಿಸಿ ಗರ್ಜಿಸಿ ತಮ್ಮ ಶತ್ರುಗಳಿಗೆ ವಿರೋಧವಾಗಿ ಜಯಶಾಲಿಯಾಗುವರು.