Isaiah 43:23 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಿನ್ನ ಕುರಿಗಳನ್ನು ನನ್ನ ಬಳಿಗೆ ಯಜ್ಞಮಾಡುವದಕ್ಕಾಗಿ ತರಲಿಲ್ಲ. ನೀನು ನನ್ನನ್ನು ಸನ್ಮಾನಿಸಲಿಲ್ಲ. ನೀನು ನನಗೆ ಬಲಿಯರ್ಪಣೆ ಮಾಡಲಿಲ್ಲ. ನೀನು ಬಲಿಯರ್ಪಣೆ ಮಾಡಬೇಕೆಂದು ನಾನು ನಿನ್ನನ್ನು ಬಲವಂತಪಡಿಸಲಿಲ್ಲ. ನೀನು ಆಯಾಸಗೊಳ್ಳುವ ತನಕ ಧೂಪಹಾಕಬೇಕೆಂದು ನಾನು ನಿನ್ನನ್ನು ಒತ್ತಾಯಪಡಿಸಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು ನನಗೆ ಹೋಮಕ್ಕಾಗಿ ಕುರಿ ಮೇಕೆಗಳನ್ನು ತಂದು ಯಜ್ಞಗಳಿಂದ ನನ್ನನ್ನು ಘನಪಡಿಸಲಿಲ್ಲ. ಕಾಣಿಕೆಗಳನ್ನು ಕೇಳಿ ನಿನ್ನನ್ನು ನಾನು ತೊಂದರೆಪಡಿಸಲಿಲ್ಲ, ಧೂಪಕ್ಕಾಗಿ ನಿನ್ನನ್ನು ಬೇಸರಗೊಳಿಸಲಿಲ್ಲ.
Kannada BSI Bible 2016
ನಿನ್ನ ದಹನಬಲಿಯ ಎಳೇ ಕರುಗಳನ್ನು ನನಗೆ ತರಲಿಲ್ಲ ಇಲ್ಲವೆ ನಿನ್ನ ಯಜ್ಞ ಗಳಿಂದ ನನ್ನನ್ನು ಸನ್ಮಾನಿಸಲಿಲ್ಲ; ನೀನು ಕಾಣಿಕೆಯನ್ನು ಅರ್ಪಿಸದೆ ಇದ್ದದ್ದಕ್ಕೆ ನಾನು ಕಾರಣವಲ್ಲ, ಇಲ್ಲವೆ ಧೂಪಕ್ಕಾಗಿ ನಿನ್ನನ್ನು ಬೇಸರಗೊಳಿಸಲಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ನನಗೆ ಹೋಮಕ್ಕಾಗಿ ಕುರಿಮೇಕೆಗಳನ್ನು ತಂದು ಯಜ್ಞಗಳಿಂದ ನನ್ನನ್ನು ಘನಪಡಿಸಲಿಲ್ಲ, ನೈವೇದ್ಯಕ್ಕಾಗಿ ನಿನ್ನನ್ನು ನಾನು ತೊಂದರೆಪಡಿಸಲಿಲ್ಲ, ಧೂಪಕ್ಕಾಗಿ ನಿನ್ನನ್ನು ಬೇಸರಗೊಳಿಸಲಿಲ್ಲ.
Kannada Bible (KNCL) BSI 2016
ಕುರಿಮೇಕೆಗಳನ್ನು ನೀನು ತರಲಿಲ್ಲ ನನಗೆ ಹೋಮಕ್ಕಾಗಿ ಬಲಿಗಳನ್ನು ಅರ್ಪಿಸಲಿಲ್ಲ ನನ್ನ ಘನತೆಗಾಗಿ ನಾ ನಿನ್ನನು ಒತ್ತಾಯಿಸಲಿಲ್ಲ ನೈವೇದ್ಯಕ್ಕಾಗಿ ನಾ ನಿನ್ನನು ಬೇಸರಗೊಳಿಸಲಿಲ್ಲ ಧೂಪಾರತಿಗಾಗಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿನ್ನ ದಹನಬಲಿಯ ಎಳೆಯ ಕುರಿಗಳನ್ನು ನನಗೆ ತರಲಿಲ್ಲ. ನಿನ್ನ ಯಜ್ಞಗಳಿಂದ ನನ್ನನ್ನು ಸನ್ಮಾನಿಸಲಿಲ್ಲ. ನೀನು ಕಾಣಿಕೆಯನ್ನು ಅರ್ಪಿಸದೆ ಇದ್ದದ್ದಕ್ಕೆ ನಿನ್ನನ್ನು ನಾನು ತೊಂದರೆಪಡಿಸಲಿಲ್ಲ, ಧೂಪಕ್ಕಾಗಿ ನಿನ್ನನ್ನು ಬೇಸರಗೊಳಿಸಲಿಲ್ಲ.