Isaiah 43:24 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನೀನು ನನ್ನ ಗೌರವಾರ್ಥವಾಗಿ ಕಾಣಿಕೆಗಳನ್ನು ಮತ್ತು ಧೂಪವನ್ನು ಖರೀದಿ ಮಾಡಲು ನಿನ್ನ ಹಣವನ್ನು ಖರ್ಚು ಮಾಡಲಿಲ್ಲ. ಆದರೆ ನೀನು ನನ್ನನ್ನು ನಿನ್ನ ಗುಲಾಮನಾಗುವಂತೆ ಬಲವಂತಪಡಿಸಿದೆ. ನೀನು ನಿನ್ನ ಪಾಪಗಳಿಂದ ನನಗೆ ಭಾರವನ್ನುಂಟುಮಾಡಿರುವೆ ಮತ್ತು ನಿನ್ನ ಅಪರಾಧಗಳಿಂದ ನನ್ನನ್ನು ಕುಗ್ಗಿಸಿರುವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು ನನಗೋಸ್ಕರ ಹಣಕೊಟ್ಟು ತೈಲವನ್ನು ತರಲಿಲ್ಲ, ಯಜ್ಞಪಶುಗಳ ಕೊಬ್ಬಿನಿಂದ ನನ್ನನ್ನು ತೃಪ್ತಿಪಡಿಸಲಿಲ್ಲ. ಆದರೆ ನಿನ್ನ ಪಾಪಗಳಿಂದ ನನ್ನನ್ನು ನೀನು ತೊಂದರೆಗೆ ಗುರಿಮಾಡಿರುವೆ. ನಿನ್ನ ದೋಷಗಳಿಂದ ನನ್ನನ್ನು ಬೇಸರಗೊಳಿಸಿದ್ದೀ.
Kannada BSI Bible 2016
ನೀನು ನನಗೋಸ್ಕರ ಹಣದಿಂದ ಗಂಧಕಾಷ್ಟವನ್ನು ಕೊಂಡು ಕೊಳ್ಳಲಿಲ್ಲ ಇಲ್ಲವೆ ನಿನ್ನ ಯಜ್ಞಪಶುಗಳ ಕೊಬ್ಬಿನಿಂದ ನನ್ನನ್ನು ತೃಪ್ತಿಪಡಿಸಲಿಲ್ಲ. ಆದರೆ ನಿನ್ನ ಪಾಪಗಳಿಂದ ನನ್ನನ್ನು ತೊಂದರೆಗೊಳಿಸಿದ್ದೀ, ಅಕ್ರಮಗಳಿಂದ ನನ್ನನು ಬೇಸರಗೊಳಿಸಿದ್ದೀ.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ನನಗೋಸ್ಕರ ಹಣಕೊಟ್ಟು ಬಜೆಯನ್ನು ತರಲಿಲ್ಲ, ಯಜ್ಞಪಶುಗಳ ವಪೆಯಿಂದ ನನ್ನನ್ನು ತೃಪ್ತಿಪಡಿಸಲಿಲ್ಲ; ಆದರೆ ನಿನ್ನ ಪಾಪಗಳಿಂದ ನನ್ನನ್ನು ನೀನು ತೊಂದರೆಪಡಿಸಿದ್ದೀ, ನಿನ್ನ ದೋಷಗಳಿಂದ ನನ್ನನ್ನು ಬೇಸರಗೊಳಿಸಿದ್ದೀ.
Kannada Bible (KNCL) BSI 2016
ನನಗೋಸ್ಕರ ನೀನು ಹಣ ತೆತ್ತು ಅಗರಬತ್ತಿ ತರಲಿಲ್ಲ ಯಜ್ಞಪಶುಗಳ ವಪೆಯಿಂದ ನನ್ನನ್ನು ತೃಪ್ತಿಪಡಿಸಲಿಲ್ಲ. ಬದಲಿಗೆ ನನ್ನನ್ನು ಪೀಡಿಸಿರುವೆ ನಿನ್ನ ಪಾಪಗಳಿಂದ ಬೇಸರಗೊಳಿಸಿರುವೆ ನನ್ನನು ನಿನ್ನ ದೋಷಗಳಿಂದ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀನು ನನಗೋಸ್ಕರ ಹಣದಿಂದ ಪರಿಮಳ ತೈಲವನ್ನು ಕೊಂಡುಕೊಳ್ಳಲಿಲ್ಲ. ನಿನ್ನ ಯಜ್ಞಪಶುಗಳ ಕೊಬ್ಬಿನಿಂದ ನನ್ನನ್ನು ತೃಪ್ತಿಪಡಿಸಲಿಲ್ಲ. ಆದರೆ ನಿನ್ನ ಪಾಪಗಳಿಂದ ನನ್ನನ್ನು ನೀನು ತೊಂದರೆಗೆ ಗುರಿಮಾಡಿರುವೆ. ನಿನ್ನ ಅಕ್ರಮಗಳಿಂದ ನನ್ನನ್ನು ಬೇಸರಗೊಳಿಸಿದ್ದೀ.