Isaiah 44:11 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಕುಶಲಕರ್ಮಿಗಳು ಆ ದೇವರುಗಳನ್ನು ಮಾಡಿದರು. ಆ ಕುಶಲಕರ್ಮಿಗಳೆಲ್ಲಾ ಜನರೇ, ಅವರು ದೇವರುಗಳಲ್ಲ. ಆ ದೇವರುಗಳೆಲ್ಲಾ ಒಟ್ಟಾಗಿ ಸೇರಿ ತಮ್ಮೊಳಗೆ ಮಾತಾಡಿಕೊಂಡರೆ ಆಗ ಅವುಗಳಿಗೆ ನಾಚಿಕೆಯೂ ಭಯವೂ ಉಂಟಾಗುವದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ವಿಗ್ರಹ ಶರಣರೆಲ್ಲಾ ಆಶಾಭಂಗಪಡುವರು, ಅದನ್ನು ಕೆತ್ತಿದವರು ಮನುಷ್ಯಮಾತ್ರದವರೇ. ಅವರೆಲ್ಲರು ಒಟ್ಟುಗೂಡಿಕೊಂಡು ನಿಲ್ಲಲಿ. ಅವರು ಒಟ್ಟಿಗೆ ಹೆದರಿಕೊಂಡು ಲಜ್ಜೆಪಡುವರು.
Kannada BSI Bible 2016
ಇಗೋ, ಅವನ ಸಂಗಡಿಗರೆಲ್ಲಾ ನಾಚಿಕೆಗೊಳಗಾಗುವರು; ಆ ಕೆಲಸ ದವರು ಮನುಷ್ಯ ಮಾತ್ರದವರೇ; ಅವರೆಲ್ಲರೂ ಒಟ್ಟುಗೂಡಿಕೊಂಡು ನಿಂತುಕೊಳ್ಳಲಿ, ಆದರೂ ಅವರು ಭಯಪಟ್ಟು ಒಟ್ಟಿಗೆ ಲಜ್ಜೆಪಡುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ವಿಗ್ರಹಶರಣರೆಲ್ಲಾ ಆಶಾಭಂಗಪಡುವರು; ಅದನ್ನು ಕೆತ್ತಿದವರು ಮನುಷ್ಯಮಾತ್ರದವರೇ; ಅವರೆಲ್ಲರು ಕೂಡಿ ನಿಲ್ಲಲಿ, ಒಟ್ಟಿಗೆ ಹೆದರಿಕೊಂಡು ಲಜ್ಜೆಪಡುವರು.
Kannada Bible (KNCL) BSI 2016
ವಿಗ್ರಹಾರಾಧಕರೆಲ್ಲರೂ ಆಶಾಭಂಗಪಡುವರು. ಅದನ್ನು ಕೆತ್ತಿದವರು ಕೇವಲ ಮನುಷ್ಯ ಮಾತ್ರರು. ಅವರೆಲ್ಲರು ಇಲ್ಲಿಗೆ ಕೂಡಿಬರಲಿ; ನಿಶ್ಚಯವಾಗಿ ಅವರು ಹೆದರಿ ಲಜ್ಜೆಪಡುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನೂ, ಅವನ ಸಂಗಡಿಗರೂ ನಾಚಿಕೆಗೆ ಒಳಗಾಗುವರು ಮತ್ತು ಆ ಕೆತ್ತನೆಯ ಕೆಲಸದವರು ಮನುಷ್ಯ ಮಾತ್ರದವರೇ. ಅವರೆಲ್ಲರೂ ಒಟ್ಟುಗೂಡಿ ನಿಂತುಕೊಳ್ಳಲಿ. ಅವರು ಭಯಪಟ್ಟು, ಒಟ್ಟಿಗೆ ಲಜ್ಜೆಪಡುವರು.