Isaiah 44:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವನು ತನ್ನ ಕೆಲಸಕ್ಕಾಗಿ ದೇವದಾರು ಮರಗಳನ್ನು, ತುರಾಯಿ ಮರಗಳನ್ನು, ಓಕ್ ಮರಗಳನ್ನು ಕಡಿಯುತ್ತಾನೆ. (ಅವನು ಆ ಮರಗಳನ್ನು ಬೆಳೆಯಿಸಲಿಲ್ಲ. ಅವು ತಾವಾಗಿಯೇ ಅಡವಿಯಲ್ಲಿ ಬೆಳೆದವು. ಅವನು ಮರದ ಸಸಿಯನ್ನು ನೆಟ್ಟರೆ ಮಳೆಯು ಆ ಸಸಿಯನ್ನು ಮರವನ್ನಾಗಿ ಬೆಳೆಯಿಸುವುದು.)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ತನ್ನ ಕೆಲಸಕ್ಕಾಗಿ ದೇವದಾರುಗಳನ್ನು ಕಡಿಯುವನು, ತುರಾಯಿ, ಅಲ್ಲೋನ್ ಮರಗಳನ್ನು ತೆಗೆದುಕೊಳ್ಳುವನು. ವನವೃಕ್ಷಗಳನ್ನು ತನಗೋಸ್ಕರ ಬೆಳೆಯುವನು. ಅವನು ಪೀತದಾರವನ್ನು ನೆಡಲು, ಮಳೆಯು ಅದನ್ನು ಬೆಳೆಸುವುದು.
Kannada BSI Bible 2016
ಅರಣ್ಯದ ಮಧ್ಯದಲ್ಲಿರುವ ಮರಗಳಲ್ಲಿ ದೇವದಾರುಗಳನ್ನು ಕಡಿದು; ತುರಾಯಿ, ಅಲ್ಲೊನ್‌, ಮತ್ತು ಓಕ್‌ಮರ ಗಳನ್ನು ತನ್ನ ಬಲಕ್ಕೋಸ್ಕರ ತೆಗೆದು ಕೊಳ್ಳುವನು. ಪೀತದಾರವನ್ನು ಅವನು ನೆಡಲು ಮಳೆಯು ಅದನ್ನು ಬೆಳೆಯಿಸುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ತನ್ನ ಕೆಲಸಕ್ಕಾಗಿ ದೇವದಾರುಗಳನ್ನು ಕಡಿಯುವನು, ತುರಾಯಿ ಅಲ್ಲೋನ್ ಮರಗಳನ್ನು ತೆಗೆದುಕೊಳ್ಳುವನು, ವನವೃಕ್ಷಗಳಲ್ಲಿ ಒಂದನ್ನು ತನಗೋಸ್ಕರ ಸಲಹುವನು; ಅವನು ಪೀತದಾರವನ್ನು ನೆಡಲು ಮಳೆಯು ಅದನ್ನು ಬೆಳೆಯಿಸುವದು.
Kannada Bible (KNCL) BSI 2016
ತನ್ನ ಕೆಲಸಕ್ಕಾಗಿ ದೇವದಾರುಗಳನ್ನು ಕಡಿಯುತ್ತಾನೆ, ತುರಾಯಿ ಅಲ್ಲೋನ್ ಮರಗಳನ್ನು ಆರಿಸಿಕೊಳ್ಳುತ್ತಾನೆ; ಅವುಗಳನ್ನು ವನವೃಕ್ಷಗಳ ನಡುವೆ ಬೆಳೆಸುತ್ತಾನೆ; ಪೀತದಾರ ಮರವನ್ನು ನೆಟ್ಟು, ಮಳೆ ಸುರಿದು ಬೆಳೆಯುವವರೆಗೂ ಕಾಯುತ್ತಾನೆ,
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅರಣ್ಯದ ಮಧ್ಯದಲ್ಲಿ ಇರುವ ಮರಗಳಲ್ಲಿ ದೇವದಾರುಗಳನ್ನು ಕಡಿದು, ತುರಾಯಿ, ಸೈಪ್ರಸ್ ಮತ್ತು ಏಲಾ ಮರಗಳನ್ನು ತನ್ನ ಕೆಲಸಕ್ಕೋಸ್ಕರ ತೆಗೆದುಕೊಳ್ಳುತ್ತಾನೆ. ಪೀತದಾರ ಮರವನ್ನು ಅವನು ನೆಡಲು, ಮಳೆಯು ಅದನ್ನು ಬೆಳೆಯಿಸುವುದು.