Isaiah 44:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಮರದ ಅರ್ಧಭಾಗವನ್ನು ಬೆಂಕಿಯಲ್ಲಿ ಉರಿಸುವನು; ಆ ಬೆಂಕಿಯಲ್ಲಿ ಮಾಂಸವನ್ನು ಬೇಯಿಸಿ ಹೊಟ್ಟೆತುಂಬಾ ತಿನ್ನುವನು; ಆ ಮರದ ಸೌದೆಯನ್ನು ಸುಟ್ಟು ಚಳಿಕಾಯಿಸಿಕೊಳ್ಳುವನು. ಆಗ ಅವನು, “ಈಗ ನನಗೆ ಬೆಚ್ಚಗಾಯಿತು. ಬೆಂಕಿಯ ಪ್ರಕಾಶದಲ್ಲಿ ನಾನು ನೋಡಬಲ್ಲೆನು!” ಎಂದು ಹೇಳುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸುವನು, ಅದರ ಮೇಲೆ ಮಾಂಸವನ್ನು ಸುಡುವನು. ಅದನ್ನು ತಿಂದು ತೃಪ್ತನಾಗುವನು. ತನ್ನನ್ನು ಕಾಯಿಸಿಕೊಳ್ಳುತ್ತಾ, “ಆಹಾ, ಬೆಂಕಿಯನ್ನು ಕಂಡೆ, ಬೆಚ್ಚಗಾಯಿತು” ಎಂದುಕೊಳ್ಳುವನು.
Kannada BSI Bible 2016
ಅದರ ಇನ್ನೊಂದು ಭಾಗದಲ್ಲಿ ಮಾಂಸವನ್ನು ಉಣ್ಣುವನು; ಮಾಂಸವನ್ನು ಸುಟ್ಟು ತೃಪ್ತಿಹೊಂದುವನು; ಹೌದು, ಅವನು ಚಳಿಕಾಯಿಸಿ ಕೊಳ್ಳುತ್ತಾ--ಆಹಾ! ಬೆಂಕಿ ಯನ್ನು ಕಂಡೆ, ಬೆಚ್ಚಗಾಯಿತು ಅಂದುಕೊಳ್ಳುವನು;
Kannada BSI JV (ಕನ್ನಡ ಸತ್ಯವೇದವು J.V. (BSI))
ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸುವನು; ಅದು ಮಾಂಸಭೋಜನಕ್ಕೆ ಅನುಕೂಲಿಸುವದು; ಬಾಡು ಸುಟ್ಟು ಹಸಿವೆ ತೀರಿಸಿಕೊಳ್ಳುವನು; ಮತ್ತು ಕಾಯಿಸಿಕೊಳ್ಳುತ್ತಾ - ಆಹಾ, ಬೆಂಕಿ ಕಂಡೆ; ಬೆಚ್ಚಗಾಯಿತು ಎಂದುಕೊಳ್ಳುವನು.
Kannada Bible (KNCL) BSI 2016
ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸುತ್ತಾನೆ. ಅದು ಮಾಂಸ ಬೇಯಿಸಲಾಗುತ್ತದೆ, ಆ ಸುಟ್ಟ ಮಾಂಸದಿಂದ ಹಸಿವೆ ತೀರಿಸಿಕೊಳ್ಳುತ್ತಾನೆ. ಆ ಬೆಂಕಿಯಿಂದ ಮೈ ಬೆಚ್ಚಗಾಯಿತು,” ಎಂದುಕೊಳ್ಳುತ್ತಾನೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸುವನು. ಅದರ ಇನ್ನೊಂದು ಭಾಗದಲ್ಲಿ ಮಾಂಸವನ್ನು ಉಣ್ಣುವನು. ಮಾಂಸವನ್ನು ಸುಟ್ಟು ತೃಪ್ತಿಹೊಂದುವನು. ಅವನು ಚಳಿಕಾಯಿಸಿಕೊಳ್ಳುತ್ತಾ, ಬೆಂಕಿಯನ್ನು ಕಂಡೆ, ಬೆಚ್ಚಗಾಯಿತು ಅಂದುಕೊಳ್ಳುವನು.