Isaiah 44:7 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನನ್ನಂತಹ ಬೇರೆ ದೇವರುಗಳಿಲ್ಲ. ಬೇರೆ ದೇವರುಗಳು ಇದ್ದರೆ ಅವು ಈಗ ಮಾತನಾಡಲಿ. ಆ ದೇವರುಗಳು ಬಂದು ತಾವು ನನ್ನಂತಿರುವುದಾಗಿ ರುಜುವಾತು ಮಾಡಲಿ. ಎಂದೆಂದಿಗೂ ಇರುವ ಈ ಜನರನ್ನು ನಾನು ಸೃಷ್ಟಿಸಿದಂದಿನಿಂದ ಏನಾಯಿತೆಂಬುದನ್ನು ನನಗೆ ತಿಳಿಸಬೇಕು. ಆ ದೇವರು ಮುಂದೆ ಸಂಭವಿಸಲಿಕ್ಕಿರುವ ವಿಷಯಗಳನ್ನು ತಿಳಿಸಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಪುರಾತನ ಕಾಲದವರನ್ನು ಸೃಷ್ಟಿಸಿದಂದಿನಿಂದ ನನ್ನ ಹಾಗೆ ಯಾರು ಪ್ರಕಟಿಸಿಕೊಂಡಿದ್ದಾರೆ? ಅಂಥವರಿದ್ದರೆ ನನ್ನೆದುರಿಗೆ ಹೇಳಿ ಸ್ಥಾಪಿಸಲಿ. ಇಲ್ಲವೆ ಮುಂದಿನವುಗಳನ್ನು ಈಗ ತಿಳಿಸಲಿ, ಭವಿಷ್ಯತ್ತುಗಳನ್ನು ಹೇಳಲಿ.
Kannada BSI Bible 2016
ನಾನು ಪುರಾತನ ಕಾಲ ದವರನ್ನು ಇಟ್ಟಂದಿನಿಂದ ನನ್ನ ಹಾಗೆ ಕರೆದು, ತಿಳಿಸಿ ಅದನ್ನು ಸರಿಯಾಗಿ ನನಗೋಸ್ಕರ ಸಿದ್ಧಮಾಡಿದವನು ಯಾರು? ಮುಂದೆ ಬರುವವುಗಳನ್ನು ಬರಬೇಕಾದದ್ದನ್ನು ಅವರು ಅವರಿಗೆ ತಿಳಿಸಲಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಪುರಾತನದವರನ್ನು ಸೃಷ್ಟಿಸಿದಂದಿನಿಂದ ನನ್ನ ಹಾಗೆ ಯಾರು ಪ್ರಕಟಿಸಿಕೊಂಡಿದ್ದಾರೆ? ಅಂಥವರಿದ್ದರೆ ನನ್ನೆದುರಿಗೆ ಹೇಳಿ ಸ್ಥಾಪಿಸಲಿ; ಇಲ್ಲವೆ ಮುಂದಿನವುಗಳನ್ನು ಈಗ ತಿಳಿಸಲಿ, ಭವಿಷ್ಯತ್ತುಗಳನ್ನು ಹೇಳಲಿ.
Kannada Bible (KNCL) BSI 2016
ನನಗೆ ಸಮಾನರು ಯಾರು? ರುಜುಪಡಿಸಲಿ, ನನ್ನ ಎದುರಿಗೆ ಬಂದು ವಾದಿಸಿ ಸ್ಥಿರಪಡಿಸಲಿ. ನರ ಸೃಷ್ಟಿಯಾದಂದಿನಿಂದ ನಡೆದುದೆಲ್ಲವನು ತಿಳಿಸಲಿ ಮುಂದಿನವುಗಳನು, ಭವಿಷ್ಯತ್ತುಗಳನು, ಈಗ ಊಹಿಸಿ ಹೇಳಲಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಪುರಾತನ ಕಾಲದವರನ್ನು ಸೃಷ್ಟಿಸಿದಂದಿನಿಂದ ನನ್ನ ಹಾಗೆ ಕರೆದು, ತಿಳಿಸಿ, ಅದನ್ನು ಸರಿಯಾಗಿ ನನಗೋಸ್ಕರ ಸಿದ್ಧಮಾಡಿದವನು ಯಾರು? ಮುಂದೆ ಬರಬೇಕಾದದ್ದನ್ನು ಅವರು ನನಗೆ ತಿಳಿಸಲಿ.