Isaiah 45:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಕಾಶದಲ್ಲಿರುವ ಮೋಡಗಳು ಒಳ್ಳೆಯತನವನ್ನು ಭೂಮಿಯ ಮೇಲೆ ಮಳೆಯಂತೆ ಸುರಿಸಲಿ. ಭೂಮಿಯು ತೆರೆಯಲ್ಪಡಲಿ; ರಕ್ಷಣೆಯು ಬೆಳೆಯಲಿ. ಒಳ್ಳೆತನವು ಅದರೊಂದಿಗೆ ಬೆಳೆಯಲಿ. ಯೆಹೋವನೆಂಬ ನಾನೇ ಅವನನ್ನು ನಿರ್ಮಿಸಿದೆನು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಕಾಶಮಂಡಲವೇ, ಮೇಲಿನಿಂದ ಧರ್ಮರಸವನ್ನು ಮಳೆಯಂತೆ ಸುರಿಸು. ಭೂಮಿಯು ಒಡೆದು ರಕ್ಷಣೆಯನ್ನು ಮೊಳೆಯಿಸಿ, ಅದರೊಡನೆ ನೀತಿಫಲವನ್ನು ಬೆಳೆಯಿಸಲಿ. ಯೆಹೋವನೆಂಬ ನಾನೇ ಇದಕ್ಕೆಲ್ಲಾ ಕರ್ತನು.
Kannada BSI Bible 2016
ಆಕಾಶ ಗಳೇ, ಮೇಲಿನಿಂದ ಹನಿಯನ್ನು ಬೀಳಿಸಿರಿ; ಗಗನಗಳು ನೀತಿಯನ್ನು ಸುರಿಸಲಿ; ಭೂಮಿಯು ತೆರೆದು ರಕ್ಷಣೆ ಯನ್ನು ತರಲಿ, ನೀತಿಯು ಅದರೊಂದಿಗೆ ಮೊಳೆ ಯಲಿ. ಇದನ್ನು ಸೃಷ್ಟಿಸಿದ ಕರ್ತನು ನಾನೇ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಕಾಶಮಂಡಲವೇ, ಮೇಲಿನಿಂದ ಧರ್ಮರಸವನ್ನು ವರ್ಷಿಸು, ಗಗನವು ಸುರಿಸಲಿ; ಭೂವಿುಯು ಒಡೆದು ರಕ್ಷಣೆಯನ್ನು ಮೊಳೆಯಿಸಿ ಅದರೊಡನೆ ನೀತಿಫಲವನ್ನು ಬೆಳೆಯಿಸಲಿ, ಯೆಹೋವನೆಂಬ ನಾನೇ ಇದಕ್ಕೆಲ್ಲಾ ಕರ್ತನು.
Kannada Bible (KNCL) BSI 2016
ವರ್ಷಿಸಲಿ ಸದ್ಧರ್ಮವನು ಆಕಾಶಮಂಡಲ ಸುರಿಸಲಿ ಮೇಲಿಂದ ಅದನ್ನು ಆ ಗಗನಮಂಡಲ; ಅಂಕುರಿಸಲಿ ಜೀವೋದ್ಧಾರವನು ಭೂಮಂಡಲ ಬೆಳೆಯಲಿ ಅದರೊಡನೆಯೇ ಸದ್ಧರ್ಮದ ಫಲ, ಸರ್ವೇಶ್ವರನಾದ ನಾನೇ ಕರ್ತ ಇದಕ್ಕೆಲ್ಲಾ.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಆಕಾಶಗಳೇ, ಮೇಲಿನಿಂದ ಹನಿಯನ್ನು ಬೀಳಿಸಿರಿ. ಗಗನವು ನೀತಿಯನ್ನು ಸುರಿಸಲಿ. ಭೂಮಿಯು ತೆರೆದು ರಕ್ಷಣೆಯನ್ನು ತರಲಿ. ನೀತಿಯು ಅದರೊಟ್ಟಿಗೆ ಮೊಳೆಯಲಿ. ಇದನ್ನು ಸೃಷ್ಟಿಸಿದ ಯೆಹೋವ ದೇವರು ನಾನೇ!