Isaiah 46:4 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನೀವು ಹುಟ್ಟಿದಾಗ ನಾನು ನಿಮ್ಮನ್ನು ಹೊತ್ತುಕೊಂಡೆನು. ನೀವು ಮುದುಕರಾಗುವಾಗಲೂ ನಾನು ನಿಮ್ಮನ್ನು ಹೊತ್ತುಕೊಳ್ಳುವೆನು. ನಿಮ್ಮ ತಲೆಕೂದಲು ನರೆತಾಗಲೂ ನಾನು ನಿಮ್ಮನ್ನು ಹೊರುವೆನು; ಯಾಕೆಂದರೆ ನಾನು ನಿಮ್ಮನ್ನು ಸೃಷ್ಟಿಸಿದೆನು. ಆದ್ದರಿಂದ ನಾನು ನಿಮ್ಮನ್ನು ಹೊತ್ತುಕೊಳ್ಳುವೆನು, ನಿಮ್ಮನ್ನು ರಕ್ಷಿಸುವೆನು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿಮ್ಮ ಮುಪ್ಪಿನ ತನಕ ನಾನೇ ಆಧಾರ, ನರೆ ಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು. ನಾನೇ ಉಂಟುಮಾಡಿದೆನು, ನಾನೇ ಹೊರುವೆನು. ಹೌದು, ನಿಮ್ಮನ್ನು ಹೊತ್ತು ಸಹಿಸಿ ನಿರ್ವಹಿಸುವೆನು.
Kannada BSI Bible 2016
ನಿಮ್ಮ ಮುಪ್ಪಿನ ಪ್ರಾಯದ ವರೆಗೆ ನಾನೇ (ಆಧಾರ) ನರೆಗೂದಲು ಬಂದಾಗಲೂ ನಾನು ನಿಮ್ಮನ್ನು ಹೊರುವೆನು, ನಾನೇ ಉಂಟುಮಾಡಿದೆನು, ನಾನೇ ಹೊರುವೆನು, ಅಂತೂ ನಾನು ನಿಮ್ಮನ್ನು ಹೊತ್ತು ಬಿಡುಗಡೆ ಮಾಡುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿಮ್ಮ ಮುಪ್ಪಿನ ತನಕ ನಾನೇ ಆಧಾರ, ನರೆಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು; ನಾನೇ ಉಂಟುಮಾಡಿದೆನು, ನಾನೇ ಹೊರುವೆನು, ಹೌದು, ನಿಮ್ಮನ್ನು ಹೊತ್ತು ಸಹಿಸಿ ನಿರ್ವಹಿಸುವೆನು.
Kannada Bible (KNCL) BSI 2016
ನಾನೇ ನಿಮಗೆ ಆಧಾರ ಮುಪ್ಪಿನ ತನಕ ಹೊತ್ತು ಸಲಹುವೆನು ನಿಮ್ಮನು ನರೆಬಂದಾಗ. ಉಂಟುಮಾಡಿದವನು ನಾನೇ, ಹೊರುವವನು ನಾನೇ ಹೌದು, ನಿಮ್ಮನು ಹೊತ್ತು ಸಲಹುವವನು ನಾನೇ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿಮ್ಮ ಮುಪ್ಪಿನ ತನಕ ನಾನೇ ಆಧಾರ; ನೆರೆ ಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು; ನಾನೇ ಉಂಟುಮಾಡಿದೆನು; ನಾನೇ ಹೊರುವೆನು; ಹೌದು, ನಿಮ್ಮನ್ನು ಹೊತ್ತು, ಸಹಿಸಿ, ನಿರ್ವಹಿಸುವೆನು.