Isaiah 47:1 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಕನ್ನಿಕೆಯೇ, ಬಾಬಿಲೋನಿನ ಕುಮಾರಿಯೇ ಕೆಳಕ್ಕಿಳಿದು ಧೂಳಿನ ಮೇಲೆ ಕುಳಿತಿಕೊ. ಕಸ್ದೀಯರ ಕುಮಾರಿಯೇ, ಸಿಂಹಾಸನರಹಿತಳಾಗಿ ನೆಲದ ಮೇಲೆ ಕುಳಿತುಕೊ! ಈಗ ನೀನು ಯಜಮಾನಿಯಲ್ಲ. ನೀನು ಕೋಮಲವಾದ ತರುಣಿ ಎಂದು ಜನರು ನಿನ್ನ ಬಗ್ಗೆ ಹೇಳುವದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯುವತಿಯೇ, ಬಾಬೆಲ್ ಪುರಿಯೇ, ಕೆಳಕ್ಕಿಳಿದು ಧೂಳಿನಲ್ಲಿ ಕುಳಿತುಕೋ, ಕಸ್ದೀಯರ ಯುವತಿಯೇ, ಸಿಂಹಾಸನರಹಿತಳಾಗಿ ನೆಲದ ಮೇಲೆ ಕುಳಿತುಕೋ! ನಿನ್ನನ್ನು ಇನ್ನು ಕೋಮಲೆ ಮತ್ತು ಸುಕುಮಾರಿ ಎಂದು ಕರೆಯುವುದಿಲ್ಲ.
Kannada BSI Bible 2016
ಬಾಬೆಲಿನ ಕುಮಾರ್ತೆಯಾದ ಓ ಕನ್ಯಾ ಸ್ತ್ರೀಯೇ, ಕೆಳಕ್ಕೆ ಇಳಿದು ಬಂದು ದೂಳಿ ನಲ್ಲಿ ಕುಳಿತುಕೋ, ಓ ಕಸ್ದೀಯರ ಕುಮಾರಿಯೇ ಸಿಂಹಾಸನರಹಿತಳಾಗಿ ನೆಲದ ಮೇಲೆ ಕುಳಿತುಕೋ. ಯಾಕಂದರೆ ಇನ್ನು ಮೇಲೆ ನೀನು ಕೋಮಲೆ ಮತ್ತು ನಾಜೂಕಾದವಳು ಎಂದು ಕರೆಯಲ್ಪಡುವದಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಯುವತಿಯೇ, ಬಾಬೆಲ್‍ಪುರಿಯೇ, ಕೆಳಕ್ಕಿಳಿದು ಧೂಳಿನಲ್ಲಿ ಕೂತುಕೋ, ಕಸ್ದೀಯರ ನಗರಿಯೇ, ಸಿಂಹಾಸನರಹಿತಳಾಗಿ ನೆಲದ ಮೇಲೆ ಕುಕ್ಕರಿಸು! ನೀನು ಇನ್ನು ಕೋಮಲೆ, ಸುಕುಮಾರಿ, ಎಂದು ಎನಿಸಿಕೊಳ್ಳೆ.
Kannada Bible (KNCL) BSI 2016
“ಕೆಳಕ್ಕಿಳಿದು ಬಾ, ಯುವತಿಯೇ ಧೂಳಲ್ಲಿ ಕುಳಿತುಕೋ, ಬಾಬೆಲೆ! ಕುವರಿಯೇ, ಕುಕ್ಕರಿಸು ನೆಲದಲಿ ಸಿಂಹಾಸನವಿಲ್ಲ ಇಲ್ಲಿ. ಎಲೈ, ಕಸ್ದೀಯರ ನಗರಿಯೇ, ನೀನಲ್ಲ ಇನ್ನು ಕೋಮಲೆ,, ಸುಕುಮಾರಿ ಎಂದು ಎನಿಸಿಕೊಳ್ಳೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬಾಬಿಲೋನಿನ ಪುತ್ರಿಯಾದ ಕನ್ನಿಕೆಯೇ, ಕೆಳಕ್ಕೆ ಇಳಿದುಬಂದು, ಧೂಳಿನಲ್ಲಿ ಕುಳಿತುಕೋ! ಕಸ್ದೀಯರ ಪುತ್ರಿಯೇ, ಸಿಂಹಾಸನರಹಿತಳಾಗಿ ನೆಲದ ಮೇಲೆ ಕುಳಿತುಕೋ. ಏಕೆಂದರೆ ಇನ್ನು ಮೇಲೆ ನಿನ್ನನ್ನು ಕೋಮಲೆ ಮತ್ತು ನಾಜೂಕಾದವಳು ಎಂದು ಕರೆಯುವುದಿಲ್ಲ.