Isaiah 47:2 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಈಗ ನೀನು ದಾಸಿಯಾಗಿ ಕೆಲಸ ಮಾಡಬೇಕು. ನಿನ್ನ ಮನೋಹರವಾದ ಉಡುಪನ್ನು ತೆಗೆದುಹಾಕು. ಬೀಸುವ ಕಲ್ಲನ್ನು ತೆಗೆದುಕೊಂಡು ಧಾನ್ಯವನ್ನು ಬೀಸು. ಜನರು ನಿನ್ನ ತೊಡೆಗಳನ್ನು ನೋಡುವ ತನಕ ನಿನ್ನ ಉಡುಪನ್ನು ಎತ್ತಿ ಹೊಳೆಯನ್ನು ದಾಟು. ನಿನ್ನ ದೇಶವನ್ನು ಬಿಟ್ಟುಹೋಗು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬೀಸುವ ಕಲ್ಲನ್ನು ಹಿಡಿದು ಹಿಟ್ಟನ್ನು ಬೀಸು, ಮುಸುಕನ್ನು ತೆಗೆದುಹಾಕಿ, ಈಜಾಡುವ ಬಟ್ಟೆಯ ನೆರಿಗೆಯನ್ನು ಹರಿದುಬಿಟ್ಟು, ಬೆತ್ತಲಾಗಿ ನದಿಗಳನ್ನು ಹಾದುಹೋಗು.
Kannada BSI Bible 2016
ಬೀಸುವ ಕಲ್ಲನ್ನು ಹಿಡಿದು ಹಿಟ್ಟನ್ನು ಬೀಸು, ಮುಸುಕನ್ನು ತೆಗೆದುಹಾಕಿ ನಿನ್ನ ಕಾಲನ್ನು ಬರಿದುಮಾಡಿ, ತೊಡೆಯನ್ನು ಮುಚ್ಚದೆ ನದಿಗಳನ್ನು ಹಾದುಹೋಗು.
Kannada BSI JV (ಕನ್ನಡ ಸತ್ಯವೇದವು J.V. (BSI))
ಬೀಸುವ ಕಲ್ಲನ್ನು ಹಿಡಿದು ಹಿಟ್ಟು ಬೀಸು, ಮುಸುಕನ್ನು ತೆಗೆದುಹಾಕಿ ಈಜಾಡುವ ನೆರಿಗೆಯನ್ನು ಹರಿದುಬಿಟ್ಟು ಬೆತ್ತಲೆಕಾಲಾಗಿ ಹೊಳೆಗಳನ್ನು ಹಾದುಹೋಗು.
Kannada Bible (KNCL) BSI 2016
ಬೀಸುವ ಕಲ್ಲನು ಹಿಡಿ, ಹಿಟ್ಟಿಗಾಗಿ ನೆರಿಗೆಯನ್ನು ಹರಿ, ಮುಸುಕನ್ನು ತೆಗೆದುಹಾಕಿ ಹೊಳೆಗಳನ್ನು ಹಾದುಹೋಗು, ನಡೆ ಬರೆಗಾಲಿನಲ್ಲಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬೀಸುವ ಕಲ್ಲನ್ನು ಹಿಡಿದು, ಹಿಟ್ಟನ್ನು ಬೀಸು. ಮುಸುಕನ್ನು ತೆಗೆದುಹಾಕಿ, ನಿನ್ನ ಕಾಲನ್ನು ಬರಿದುಮಾಡಿ, ತೊಡೆಯನ್ನು ಮುಚ್ಚದೆ, ನದಿಗಳನ್ನು ಹಾದುಹೋಗು.