Isaiah 49:18 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಮೇಲಕ್ಕೆ ನೋಡು! ನಿನ್ನ ಸುತ್ತಲೂ ನೋಡು! ನಿನ್ನ ಮಕ್ಕಳೆಲ್ಲಾ ಒಟ್ಟಾಗಿ ಸೇರಿ ನಿನ್ನ ಬಳಿಗೆ ಬರುತ್ತಿದ್ದಾರೆ. ಯೆಹೋವನು ಹೇಳುವುದೇನೆಂದರೆ, “ನನ್ನ ಜೀವದಾಣೆ, ನಿನ್ನ ಮಕ್ಕಳು ನೀನು ಕೊರಳಲ್ಲಿ ಧರಿಸುವ ಹಾರದಂತಿರುವರು. ಮದುಮಗಳು ಧರಿಸುವ ಕಂಠಹಾರದಂತೆ ನಿನ್ನ ಮಕ್ಕಳಿರುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕಣ್ಣೆತ್ತಿ ಸುತ್ತಲು ನೋಡು! ಇವರೆಲ್ಲರೂ ಕೂಡಿಕೊಂಡು ನಿನ್ನ ಬಳಿಗೆ ಬರುತ್ತಿದ್ದಾರೆ. ಯೆಹೋವನು ಹೀಗೆನ್ನುತ್ತಾನೆ, “ನನ್ನ ಜೀವದಾಣೆ, ನೀನು ಇವರನ್ನೆಲ್ಲಾ ಆಭರಣವನ್ನಾಗಿ ಧರಿಸಿಕೊಳ್ಳುವಿ, ವಧುವು ಒಡ್ಯಾಣವನ್ನು ಕಟ್ಟಿಕೊಳ್ಳುವ ಹಾಗೆ ನೀನು ಇವರನ್ನು ನಿನ್ನ ಎದೆಗೆ ಒರಗಿ ಕಟ್ಟಿಕೊಳ್ಳುವಿ.
Kannada BSI Bible 2016
ನಿನ್ನ ಕಣ್ಣುಗಳನ್ನು ಎತ್ತಿ ಸುತ್ತಲೂ ನೋಡು. ಇಗೋ, ಇವರೆಲ್ಲರೂ ಕೂಡಿ ಕೊಂಡು ನಿನ್ನ ಬಳಿಗೆ ಬರುತ್ತಿದ್ದಾರೆ. ಕರ್ತನು ಹೇಳುವದೇನಂದರೆ--ನನ್ನ ಜೀವದಾಣೆ, ನಿಶ್ಚಯವಾಗಿ ನೀನು ಅವರನ್ನೆಲ್ಲಾ ಆಭರಣಗಳಂತೆ ಧರಿಸಿಕೊಳ್ಳುವಿ ಮತ್ತು ನೀನು ಅವರನ್ನು ಮದಲಗಿತ್ತಿಯಂತೆ ಕಟ್ಟಿ ಕೊಳ್ಳುವಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಕಣ್ಣೆತ್ತಿ ಸುತ್ತಲು ನೋಡು! ಇವರೆಲ್ಲರೂ ಕೂಡಿಕೊಂಡು ನಿನ್ನ ಬಳಿಗೆ ಬರುತ್ತಿದ್ದಾರೆ. ಯೆಹೋವನು ಹೀಗನ್ನುತ್ತಾನೆ - ನನ್ನ ಜೀವದಾಣೆ, ನೀನು ಇವರನ್ನೆಲ್ಲಾ ಆಭರಣವನ್ನಾಗಿ ಧರಿಸಿಕೊಳ್ಳುವಿ, ವಧುವು ಒಡ್ಯಾಣವನ್ನು ಕಟ್ಟಿಕೊಳ್ಳುವಂತೆ ನೀನು ಇವರನ್ನು ಕಟ್ಟಿಕೊಳ್ಳುವಿ.
Kannada Bible (KNCL) BSI 2016
ಕಣ್ಣೆತ್ತಿ ಸುತ್ತಮುತ್ತಲು ನೋಡು: ಬರುತಿಹರು ನಿನ್ನ ಬಳಿಗೆ ಅವರೆಲ್ಲರು ಕೂಡಿಕೊಂಡು. ನನ್ನ ಜೀವದಾಣೆ ನಿನಗೆ ಹೇಳುವುದೇನೆಂದರೆ: ‘ವಧುವು ಒಡವೆಗಳನು ಧರಿಸಿಕೊಳ್ಳುವಂತೆ ಅವರಾಗುವರು ನಿನಗೆ ಆಭರಣಗಳಂತೆ.’
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿನ್ನ ಕಣ್ಣುಗಳನ್ನು ಎತ್ತಿ ಸುತ್ತಲೂ ನೋಡು. ಇವರೆಲ್ಲರೂ ಕೂಡಿಕೊಂಡು ನಿನ್ನ ಬಳಿಗೆ ಬರುತ್ತಿದ್ದಾರೆ. ಯೆಹೋವ ದೇವರು ಹೇಳುವುದೇನೆಂದರೆ,” ನನ್ನ ಜೀವದಾಣೆ, ನಿಶ್ಚಯವಾಗಿ ನೀನು ಅವರನ್ನೆಲ್ಲಾ ಆಭರಣಗಳಂತೆ ಧರಿಸಿಕೊಳ್ಳುವೆ ಮತ್ತು ನೀನು ಅವರನ್ನು ಮದಲಗಿತ್ತಿಯಂತೆ ಕಟ್ಟಿಕೊಳ್ಳುವೆ.