Isaiah 49:19 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಈಗ ನೀನು ಸೋತವಳೂ ನಾಶವಾದವಳೂ ಆಗಿರುವಿ. ನಿನ್ನ ಭೂಮಿಯು ನಿಷ್ಪ್ರಯೋಜಕವಾಗಿದೆ. ಆದರೆ ಸ್ವಲ್ಪ ಸಮಯದ ನಂತರ ನಿನ್ನ ದೇಶವು ಜನರಿಂದ ತುಂಬುವದು. ನಿನ್ನನ್ನು ನಾಶಮಾಡಿದವರು ಬಹುದೂರ ಹೋಗುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿನ್ನ ಹಾಳು ಪ್ರದೇಶಗಳು, ನಿನ್ನ ಬೀಳು ಭೂಮಿಯು, ಕೆಟ್ಟುಹೋದ ನಿನ್ನ ಸೀಮೆಯು ಇವುಗಳಿಗೆ ಏನಾಗುವುದೆಂದು ನೋಡುವಿ. ನಿನ್ನನ್ನು ನುಂಗಿದವರು ದೂರವಾಗುವರು, ನಿನ್ನ ನಿವಾಸಿಗಳಿಗೆ ನೀನು ಸಂಕೋಚಸ್ಥಳವಾಗುವಿ.
Kannada BSI Bible 2016
ನಿನ್ನ ಹಾಳಾದ ಸ್ಥಳಗಳೂ ನಿನ್ನ ಏಕಾಂತ ಸ್ಥಳಗಳೂ ಕೆಡವಲ್ಪಟ್ಟ ನಿನ್ನ ದೇಶವೂ ಈಗ ನಿವಾಸಿ ಗಳಿಗೆ ಇಕ್ಕಟ್ಟಾಗುವವು; ನಿನ್ನನ್ನು ನುಂಗಿದವರು ದೂರ ವಾಗುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿನ್ನ ಹಾಳು ಪ್ರದೇಶಗಳು, ನಿನ್ನ ಬೀಳು ಭೂವಿುಯು, ಕೆಟ್ಟುಹೋದ ನಿನ್ನ ಸೀಮೆಯು ಇವುಗಳಿಗೆ ಏನಾಗುವದೆಂದರೆ - ನೋಡು, ನಿನ್ನನ್ನು ನುಂಗಿದವರು ದೂರವಾಗುವರು, ನಿನ್ನ ನಿವಾಸಿಗಳಿಗೆ ನೀನು ಸಂಕೋಚಸ್ಥಳವಾಗುವಿ,
Kannada Bible (KNCL) BSI 2016
ಪಾಳುಬಿದ್ದ ನಿನ್ನ ಪ್ರದೇಶಗಳು ಬೀಳುಬಿದ್ದ ನಿನ್ನ ಭೂಮಿಗಳು ಕೆಡವಿಬಿದ್ದ ನಿನ್ನ ಬೀಡುಗಳು ಕಿಕ್ಕಿರಿದಾಗುವುವು ನಿನ್ನ ನಿವಾಸಿಗಳಿಗೆ; ನಿನ್ನ ಕಬಳಿಸಿದವರು ದೂರವಾಗುವರು ನಿನಗೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಏಕೆಂದರೆ ನಿನ್ನ ಹಾಳಾದ ಸ್ಥಳಗಳೂ ನಿನ್ನ ಏಕಾಂತ ಸ್ಥಳಗಳೂ ಕೆಡವಿಬಿದ್ದ ನಿನ್ನ ದೇಶವೂ ಈಗ ನಿವಾಸಿಗಳಿಗೆ ಇಕ್ಕಟ್ಟಾಗುವುವು. ನಿನ್ನನ್ನು ನುಂಗಿದವರು ದೂರವಾಗುವರು.