Isaiah 49:22 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ನಾನು ಜನಾಂಗಗಳಿಗೆ ಕೈಬೀಸಿ ಸನ್ನೆ ಮಾಡುವೆನು. ಎಲ್ಲಾ ಜನರು ನೋಡುವಂತೆ ನಾನು ನನ್ನ ಧ್ವಜವನ್ನು ಎತ್ತುವೆನು. ಆಗ ಅವರು ನಿನ್ನ ಮಕ್ಕಳನ್ನು ನಿನಗೆ ತಂದೊಪ್ಪಿಸುವರು. ಅವರು ನಿನ್ನ ಮಕ್ಕಳನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ತರುವರು. ತಮ್ಮ ಕೈಗಳಲ್ಲಿ ಅವರನ್ನು ಎತ್ತಿಕೊಂಡು ಬರುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕರ್ತನಾದ ಯೆಹೋವನು ಹೀಗೆನ್ನುತ್ತಾನೆ, “ಇಗೋ, ನಾನು ಜನಾಂಗಗಳಿಗೆ ಕೈಸನ್ನೆಮಾಡಿ ದೇಶಾಂತರಗಳಿಗೆ ನನ್ನ ಧ್ವಜವನ್ನು ಎತ್ತುವೆನು. ಅವರು ನಿನ್ನ ಕುಮಾರರನ್ನು ಎದೆಗಪ್ಪಿಕೊಂಡು ಬರುವರು. ನಿನ್ನ ಕುಮಾರ್ತೆಯರನ್ನು ಹೆಗಲ ಮೇಲೆ ಕರೆದುತರುವರು.
Kannada BSI Bible 2016
ಕರ್ತನಾದ ದೇವರು ಇಂತೆನ್ನುತ್ತಾನೆ--ಇಗೋ, ನಾನು ಅನ್ಯಜನಗಳ ಕಡೆಗೆ ಕೈ ಎತ್ತಿ ಜನರಿಗೆ ನನ್ನ ಧ್ವಜವನ್ನು ಎತ್ತುವೆನು; ಅವರು ನಿನ್ನ ಕುಮಾರರನ್ನು ಕೈಹಿಡಿದು ತರುವರು; ನಿನ್ನ ಕುಮಾರ್ತೆಯರನ್ನು ತಮ್ಮ ಹೆಗಲಮೇಲೆ ತರುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕರ್ತನಾದ ಯೆಹೋವನು ಹೀಗನ್ನುತ್ತಾನೆ - ಇಗೋ, ನಾನು ಜನಾಂಗಗಳಿಗೆ ಕೈಸನ್ನೆಮಾಡಿ ದೇಶಾಂತರಗಳವರಿಗೆ ನನ್ನ ಧ್ವಜವನ್ನು ಎತ್ತುವೆನು; ಅವರು ನಿನ್ನ ಕುಮಾರರನ್ನು ಎದೆಗಪ್ಪಿಕೊಂಡು ಬರುವರು, ನಿನ್ನ ಕುಮಾರ್ತೆಯರನ್ನು ಹೆಗಲ ಮೇಲೆ ಕರತರುವರು.
Kannada Bible (KNCL) BSI 2016
ಇಂತೆನ್ನುವರು ಸ್ವಾಮಿ ಸರ್ವೇಶ್ವರ: ಇದೋ, ಕೈಸನ್ನೆಮಾಡುವೆ ಜನಾಂಗಗಳಿಗೆ ನನ್ನ ಧ್ವಜವನ್ನೆತ್ತುವೆ ದೇಶಾಂತರಗಳವರೆಗೆ ಬರುವರವರು ನಿನ್ನ ಕುವರರನು ಅಪ್ಪಿಕೊಂಡು ಎದೆಗೆ ಕರೆತರುವರು ನಿನ್ನ ಕುವರಿಯರನು ಹೆಗಲಮೇಲೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸಾರ್ವಭೌಮ ಯೆಹೋವ ದೇವರು, ಇಂತೆನ್ನುತ್ತಾರೆ, “ಇಗೋ, ನಾನು ರಾಷ್ಟ್ರಗಳ ಕಡೆಗೆ ಕೈಯೆತ್ತಿ ಜನರಿಗೆ ನನ್ನ ಧ್ವಜವನ್ನು ಎತ್ತುವೆನು. ಅವರು ನಿನ್ನ ಪುತ್ರರನ್ನು ಕೈಹಿಡಿದು ತರುವರು. ನಿನ್ನ ಪುತ್ರಿಯರನ್ನು ಹೆಗಲ ಮೇಲೆ ತರುವರು.