Isaiah 5:28 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ವೈರಿಗಳ ಬಾಣಗಳು ಬಹು ಹರಿತವಾದದ್ದು. ಅವರ ಬಿಲ್ಲುಗಳೆಲ್ಲವೂ ಬಾಣವೆಸೆಯಲು ತಯಾರಾಗಿವೆ. ಅವರ ಕುದುರೆಗಳ ಪಾದಗಳು ಬಂಡೆಯಂತೆ ಗಟ್ಟಿಯಾಗಿವೆ. ಅವರ ರಥಗಳ ಹಿಂದಿನಿಂದ ಧೂಳಿನ ಮೋಡವೇ ಹಾರುವದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರ ಬಾಣಗಳು ಹದವಾಗಿವೆ. ಅವರ ಬಿಲ್ಲುಗಳು ಬಿಗಿದಿವೆ. ಅವರ ಕುದುರೆಗಳ ಗೊರಸುಗಳು ಕಲ್ಲಿನಂತೆಯೂ, ಚಕ್ರಗಳು ಬಿರುಗಾಳಿಯಂತೆಯೂ ರಭಸವಾಗಿವೆ.
Kannada BSI Bible 2016
ಅವರ ಬಾಣಗಳು ಹದವಾಗಿವೆ, ಅವರ ಬಿಲ್ಲುಗಳು ಬೊಗ್ಗಿವೆ, ಅವರ ಕುದುರೆಗಳ ಗೊರಸುಗಳು ಕಲ್ಲಿನಂತೆಯೂ ಅವರ ಚಕ್ರಗಳು ಬಿರು ಗಾಳಿಯಂತೆಯೂ ರಭಸವಾಗಿವೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರ ಅಂಬುಗಳು ಮೊನೆಯಾಗಿವೆ, ಬಿಲ್ಲುಗಳು ಬಿಗಿದಿವೆ; ಕುದುರೆಗಳ ಗೊರಸೆಗಳು ಕಲ್ಲಿನಂತಿವೆ; ಚಕ್ರಗಳು ಬಿರುಗಾಳಿಯಂತೆ ರಭಸವಾಗಿವೆ;
Kannada Bible (KNCL) BSI 2016
ಚೂಪಾಗಿವೆ ಅವರ ಬಾಣಗಳು; ಬಿಗಿದಿವೆ ಬಿಲ್ಲುಗಳು, ಬೆಣಚುಕಲ್ಲಿನಂತಿವೆ ಕುದುರೆಗಳ ಗೊರಸುಗಳು, ಸುತ್ತುತ್ತಿವೆ ಸುಂಟರಗಾಳಿಯಂತವರ ಚಕ್ರಗಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರ ಬಾಣಗಳು ಹದವಾಗಿವೆ. ಅವರ ಬಿಲ್ಲುಗಳು ಬಿಗಿದಿವೆ, ಅವರ ಕುದುರೆಗಳ ಗೊರಸುಗಳು ಕಲ್ಲಿನಂತೆಯೂ, ಅವರ ರಥಗಳ ಚಕ್ರಗಳು ಬಿರುಗಾಳಿಯಂತೆಯೂ ರಭಸವಾಗಿವೆ.