Isaiah 5:6 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾನು ಅದನ್ನು ಬೆಂಗಾಡಾಗಿ ಮಾಡುವೆನು. ಅದರಲ್ಲಿರುವ ಸಸಿಗಳನ್ನು ಯಾರೂ ಲಕ್ಷಿಸರು. ತೋಟದಲ್ಲಿ ಯಾರೂ ಕೆಲಸ ಮಾಡುವದಿಲ್ಲ. ಮುಳ್ಳುಗಳೂ ಹಣಜಿಗಳೂ ಅಲ್ಲಿ ಬೆಳೆಯುವವು. ಅಲ್ಲಿ ಮಳೆಗರೆಯದಂತೆ ಮೋಡಗಳಿಗೆ ಆಜ್ಞಾಪಿಸುವೆನು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದನ್ನು ಹಾಳುಮಾಡುವೆನು. ದ್ರಾಕ್ಷಿಯ ತೋಟವನ್ನು ಯಾರೂ ಕುಡಿ ಕತ್ತರಿಸಿ ಅಗೆಯುವುದಿಲ್ಲ. ಅದರಲ್ಲಿ ಮುಳ್ಳುಕಳೆ ಬೆಳೆಯುವುದು. ಅದರ ಮೇಲೆ ಮಳೆ ಸುರಿಸಬಾರದೆಂದು ಮೋಡಗಳಿಗೆ ಅಪ್ಪಣೆ ಕೊಡುವೆನು.
Kannada BSI Bible 2016
ಅದನ್ನು ನಾನು ಹಾಳಾಗಲು ಬಿಡುವೆನು: ಅದನ್ನು ಯಾರೂ ಕುಡಿ ಕತ್ತರಿಸುವದಿಲ್ಲ; ಅಗೆಯುವದೂ ಇಲ್ಲ. ಆದರೆ ಅಲ್ಲಿ ಮುಳ್ಳುಪೊದೆಗಳು ಬೆಳೆಯುವವು; ಅಲ್ಲದೆ ಅದರ ಮೇಲೆ ಮಳೆ ಸುರಿಸಬಾರದೆಂದು ಮೋಡಗಳಿಗೆ ಆಜ್ಞಾ ಪಿಸುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದನ್ನು ಹಾಳುಮಾಡುವೆನು, ಯಾರೂ ಕುಡಿಕತ್ತರಿಸಿ ಅಗತೆಮಾಡುವದಿಲ್ಲ; ಅದರಲ್ಲಿ ಮುಳ್ಳುಗಿಳ್ಳು ಬೆಳೆದುಹೋಗುವದು; ಮತ್ತು ಅದರ ಮೇಲೆ ಮಳೆಸುರಿಸಬಾರದೆಂದು ಮೇಘಗಳಿಗೆ ಅಪ್ಪಣೆಮಾಡುವೆನು.
Kannada Bible (KNCL) BSI 2016
ಬಂಜರು ಭೂಮಿಯಾಗಿಸುವೆನು ಅದನ್ನು; ಕುಡಿಕತ್ತರಿಸುವರಾರೂ ಇರರು ಅದಕ್ಕೆ. ಮುಳ್ಳುಕಳೆ ಬೆಳೆಯುವುದು ಅದರೊಳಗೆ. ನೀಡುವೆನು ಆಣತಿಯೊಂದನು ಮೋಡಗಳಿಗೆ; ಸುರಿಸವು ತುಂತುರು ಮಳೆಯನ್ನೂ ಅದಕ್ಕೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದನ್ನು ನಾನು ಹಾಳಾಗಲು ಬಿಡುವೆನು. ಅದರ ಕುಡಿ ಯಾರೂ ಕತ್ತರಿಸುವುದಿಲ್ಲ, ಅಗೆಯುವುದೂ ಇಲ್ಲ, ಅದರಲ್ಲಿ ಮುಳ್ಳು ಕಳೆ ಬೆಳೆಯುವುದು. ಅದರ ಮೇಲೆ ಮಳೆ ಸುರಿಸಬಾರದೆಂದು ಮೋಡಗಳಿಗೆ ಆಜ್ಞಾಪಿಸುವೆನು.”