Isaiah 51:12 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನು ಹೇಳುವುದೇನೆಂದರೆ, “ನಿನ್ನನ್ನು ಸಂತೈಸುವಾತನು ನಾನೇ. ಆದ್ದರಿಂದ ನೀನು ಜನರಿಗೆ ಯಾಕೆ ಹೆದರಬೇಕು. ಅವರು ಹುಟ್ಟಿ ಸಾಯುವ ನರರಾಗಿದ್ದಾರೆ. ಅವರು ಹುಲ್ಲಿನಂತೆ ಸಾಯುವ ಕೇವಲ ಮಾನವರಾಗಿದ್ದಾರೆ.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನೇ, ನಾನೇ ನಿನ್ನನ್ನು ಸಂತೈಸುವವನು. ಮರ್ತ್ಯಮನುಷ್ಯನಿಗೆ, ಹುಲ್ಲಿನ ಗತಿಗೆ ಬರುವ ನರಜನ್ಮದವನಿಗೆ ಭಯಪಡುವ ನೀನು ಎಂಥವನು?
Kannada BSI Bible 2016
ನಾನೇ, ನಾನೇ ನಿನ್ನನ್ನು ಆದರಿಸುವವನಾಗಿ ದ್ದೇನೆ; ಹಾಗಾದರೆ ಸಾಯುವ ಮನುಷ್ಯನಿಗೂ ಹುಲ್ಲಿನಂತೆ ಮಾಡಲ್ಪಟ್ಟಿರುವ ನರಪುತ್ರನಿಗೂ ಭಯ ಪಡುವ ನೀನು ಯಾರು?
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನೇ, ನಾನೇ ನಿನ್ನನ್ನು ಸಂತೈಸುವವನಾಗಿರುವಲ್ಲಿ ಮರ್ತ್ಯಮನುಷ್ಯನಿಗೆ, ಹುಲ್ಲಿನ ಗತಿಗೆ ಬರುವ ನರಜನ್ಮದವನಿಗೆ ಭಯಪಡುವ ನೀನು ಎಂಥವನು?
Kannada Bible (KNCL) BSI 2016
“ನಾನೆ, ನಾನೆ ನಿನ್ನನು ಸಂತೈಸುವವನಾಗಿರೆ, ನೀ ಭಯಪಡುವುದೇಕೆ ಮರ್ತ್ಯನಾದ ಮಾನವನಿಗೆ? ನೀ ಹೆದರಿ ನಡುಗುವುದೇಕೆ ಹುಲುಮಾನವನಿಗೆ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ನಾನೇ, ನಾನೇ ನಿಮ್ಮನ್ನು ಸಂತೈಸುವವನಾಗಿದ್ದೇನೆ. ಹಾಗಾದರೆ ಸಾಯುವ ಮನುಷ್ಯನಿಗೂ, ಹುಲ್ಲಿನಂತ್ತಿರುವ ಮಾನವನಿಗೂ ಭಯಪಡುವ ನೀನು ಯಾರು?