Isaiah 51:17 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಜೆರುಸಲೇಮೇ, ಎಚ್ಚರಗೊಳ್ಳು; ಎದ್ದೇಳು; ಯೆಹೋವನು ನಿನ್ನ ಮೇಲೆ ಬಹಳವಾಗಿ ಕೋಪಗೊಂಡು ನಿನ್ನನ್ನು ಶಿಕ್ಷಿಸಿದ್ದಾನೆ. ಆ ಶಿಕ್ಷೆಯು ವಿಷತುಂಬಿದ ಪಾತ್ರೆಯಂತಿದೆ. ನೀನು ಅದನ್ನು ಕುಡಿಯಲೇಬೇಕಿತ್ತು. ಈಗ ನೀನು ಅದನ್ನು ಕುಡಿದಿರುವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನು ತನ್ನ ರೋಷವನ್ನು ತುಂಬಿಕೊಟ್ಟ ಪಾತ್ರೆಯಿಂದ ಕುಡಿದ ಯೆರೂಸಲೇಮೇ, ಎಚ್ಚೆತ್ತುಕೋ, ಎಚ್ಚೆತ್ತುಕೋ, ಎದ್ದುನಿಲ್ಲು! ಭ್ರಮಣಗೊಳಿಸುವ ಆ ಪಾನದ ಪಾತ್ರೆಯಲ್ಲಿ ಒಂದು ತೊಟ್ಟನ್ನೂ ಉಳಿಸದೆ ಕುಡಿದುಬಿಟ್ಟಿದ್ದಿ.
Kannada BSI Bible 2016
ಕರ್ತನ ಕೈಯಿಂದ ಆತನ ಉಗ್ರದ ಪಾತ್ರೆಯನ್ನು ಕುಡಿದ ಓ ಯೆರೂಸಲೇಮೇ, ಎಚ್ಚರಗೊಳ್ಳು, ಎಚ್ಚರಗೊಳ್ಳು, ಎದ್ದೇಳು; ನೀನು ತತ್ತರಗೊಳಿಸುವಂಥ ಪಾತ್ರೆಯಲ್ಲಿದ್ದ ಮಡ್ಡಿಯನ್ನು ಕುಡಿದು ಹೀರಿಬಿಟ್ಟಿದ್ದೀ.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನು ತನ್ನ ರೋಷವನ್ನು ತುಂಬಿಕೊಟ್ಟ ಪಾತ್ರೆಯಿಂದ ಕುಡಿದ ಯೆರೂಸಲೇಮೇ, ಎಚ್ಚತ್ತುಕೋ, ಎಚ್ಚತ್ತುಕೋ, ಎದ್ದು ನಿಲ್ಲು! ಭ್ರಮಣಗೊಳಿಸುವ ಆ ಪಾನದ ಪಾತ್ರೆಯಲ್ಲಿ ಒಂದು ತೊಟ್ಟನ್ನೂ ಉಳಿಸದೆ ಕುಡಿದು ಬಿಟ್ಟಿದ್ದೀ.
Kannada Bible (KNCL) BSI 2016
ಎಚ್ಚೆತ್ತುಕೊ, ಎಚ್ಚೆತ್ತುಕೊ, ನೀನೆದ್ದು ನಿಲ್ಲು ಜೆರುಸಲೇಮೆ! ಕುಡಿದುಬಿಟ್ಟಿರುವೆ ನೀ ಮತ್ತು ತರುವ ಪಾನಪಾತ್ರೆಯಿಂದ ತೊಟ್ಟನ್ನೂ ಬಿಡದೆ ಹೀರಿರುವೆ ಸರ್ವೇಶ್ವರನ ಕೋಪ ತುಂಬಿದಾ ಕೊಡದಿಂದ!
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರ ಕೈಯಿಂದ ಆತನ ಕೋಪದ ಪಾತ್ರೆಯನ್ನು ಕುಡಿದ ಯೆರೂಸಲೇಮೇ, ಎಚ್ಚರಗೊಳ್ಳು, ಎಚ್ಚರಗೊಳ್ಳು, ಎದ್ದೇಳು! ನೀನು ತತ್ತರಗೊಳಿಸುವಂಥ ಪಾತ್ರೆಯಲ್ಲಿದ್ದ ಮಡ್ಡಿಯನ್ನು ಕುಡಿದು ಹೀರಿಬಿಟ್ಟಿದ್ದೀ.