Isaiah 51:19 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಜೆರುಸಲೇಮಿಗೆ ತೊಂದರೆಗಳು ಎರಡು ಗುಂಪುಗಳಾಗಿ ಬಂದವು: ಲೂಟಿ ಮತ್ತು ಕೊರತೆ; ಕ್ಷಾಮ ಮತ್ತು ಖಡ್ಗ. ನೀನು ಸಂಕಟ ಅನುಭವಿಸುವಾಗ ಯಾರೂ ನಿನಗೆ ಸಹಾಯ ಮಾಡಲಿಲ್ಲ. ಯಾರೂ ನಿನಗೆ ಕರುಣೆ ತೋರಿಸಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿನಗೆ ಈ ಎರಡು ಬಾಧೆಗಳು ಬಂದಿವೆ, ನಿನಗೋಸ್ಕರ ಸಂತಾಪವನ್ನು ತೋರಿಸುವವರು ಯಾರಿದ್ದಾರೆ? ನಾಶವೋ, ಸಂಹಾರವೋ, ಕ್ಷಾಮವೋ, ಶಕ್ತಿಯೋ. ನಾನು ನಿನ್ನನ್ನು ಹೇಗೆ ಸಂತೈಸಲಿ?
Kannada BSI Bible 2016
ಈ ಎರಡು ಸಂಗತಿ ಗಳು ನಿನಗೆ ಸಂಭವಿಸಿವೆ; ನಿನಗೋಸ್ಕರ ಚಿಂತಿಸು ವವರು ಯಾರಿದ್ದಾರೆ? ನಾಶನವೋ ಸಂಹಾರವೋ ಕ್ಷಾಮವೋ ಕತ್ತಿಯೋ ನಾನು ಯಾರಿಂದ ನಿನ್ನನ್ನು ಆಧರಿಸಲಿ?
Kannada BSI JV (ಕನ್ನಡ ಸತ್ಯವೇದವು J.V. (BSI))
ಸಹತಾಪದಿಂದ ನಿನಗಾಗಿ ಬಡುಕೊಳ್ಳುವವರು ಯಾರಿದ್ದಾರೆ? ನಿನಗೆ ಈ ಎರಡು ಬಾಧೆಗಳು ಬಂದಿವೆ, [ನಿನ್ನ ದೇಶವು] ಹಾಳುಪಾಳಾಗಿದೆ, [ನಿನ್ನ ಪ್ರಜೆಗೆ] ಕ್ಷಾಮವೂ ಖಡ್ಗವೂ ಪ್ರಾಪ್ತವಾಗಿವೆ; ನಾನು ನಿನ್ನನ್ನು ಹೇಗೆ ಸಂತೈಸಲಿ?
Kannada Bible (KNCL) BSI 2016
ಬಂದೊದಗಿವೆ ಇಮ್ಮಡಿ ಬಾಧೆ ನಿನಗೆ ಪ್ರಲಾಪಿಸಿ ಗೋಳಿಡುವವರಾರು ನಿನ್ನೊಂದಿಗೆ? ನಾಡು ಹಾಳುಪಾಳಾಗಿದೆ, ತುತ್ತಾಗಿದೆ ಪ್ರಜೆ ಕ್ಷಾಮಕ್ಷೋಭೆಗೆ; ನಿನ್ನನು ಸಂತೈಸುವುದಾದರು ಹೇಗೆ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈ ಎರಡು ಸಂಗತಿಗಳು ನಿನಗೆ ಸಂಭವಿಸಿವೆ, ನಿನಗೋಸ್ಕರ ಚಿಂತಿಸುವವರು ಯಾರಿದ್ದಾರೆ? ನಾಶನವೋ ಸಂಹಾರವೋ ಕ್ಷಾಮವೋ ಖಡ್ಗವೋ, ಯಾರು ನಿನ್ನನ್ನು ಸಂತೈಸುವರು?