Isaiah 51:20 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಿನ್ನ ಜನರು ಬಲಹೀನರಾದರು. ಅವರು ನೆಲದ ಮೇಲೆ ಬಿದ್ದು ಅಲ್ಲಿಯೇ ಮಲಗಿದರು. ಆ ಜನರು ರಸ್ತೆಯ ಮೂಲೆಮೂಲೆಗಳಲ್ಲಿ ಬಿದ್ದುಕೊಂಡಿರುತ್ತಾರೆ. ಅವರು ಬಲೆಯೊಳಗೆ ಸಿಕ್ಕಿಬಿದ್ದ ಜಿಂಕೆಯಂತಿರುವರು. ಯೆಹೋವನ ಕೋಪದಿಂದ ಇನ್ನೂ ಹೆಚ್ಚಿನ ಶಿಕ್ಷೆಯನ್ನು, ತಾಳಲಾರದಷ್ಟು ಶಿಕ್ಷೆಯನ್ನು ಅನುಭವಿಸಿದರು. ದೇವರು ಇನ್ನೂ ಹೆಚ್ಚಾಗಿ ಶಿಕ್ಷೆಕೊಡುವುದಾಗಿ ಹೇಳಿದಾಗ ಅವರು ಕಂಗಾಲಾದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿನ್ನ ಮಕ್ಕಳು ಪ್ರಜ್ಞೆತಪ್ಪಿದವರಾಗಿ ಬಲೆಗೆ ಸಿಕ್ಕಿದ ಜಿಂಕೆಗಳಂತೆ ಬೀದಿಗಳಲ್ಲಿ, ಚೌಕದಲ್ಲಿ ಬಿದ್ದಿದ್ದಾರೆ. ಯೆಹೋವನ ರೋಷವನ್ನೂ, ನಿನ್ನ ದೇವರ ಗದರಿಕೆಯನ್ನೂ ಸಾಕಷ್ಟು ಅನುಭವಿಸಿದ್ದಾರೆ.
Kannada BSI Bible 2016
ನಿನ್ನ ಕುಮಾರರು ಮೂರ್ಛೆ ಹೋಗಿ, ಬಲೆಗೆ ಸಿಕ್ಕಿದ ಕಾಡು ಗೂಳಿಗಳಂತೆ ಎಲ್ಲಾ ಬೀದಿಗಳು ಕೂಡುವ ಚೌಕದಲ್ಲಿ ಅವರು ಬಿದ್ದಿದ್ದಾರೆ; ಅವರು ಕರ್ತನ ಉಗ್ರದಿಂದಲೂ ನಿನ್ನ ದೇವರ ಗದರಿಕೆ ಯಿಂದಲೂ ತುಂಬಿದ್ದಾರೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿನ್ನ ಮಕ್ಕಳು ಪ್ರಜ್ಞೆತಪ್ಪಿದವರಾಗಿ ಬಲೆಗೆ ಸಿಕ್ಕಿದ ಜಿಂಕೆಯಂತೆ ಬೀದಿಗಳೆಲ್ಲಾ ಕೂಡುವ ಚೌಕದಲ್ಲಿ ಬಿದ್ದಿದ್ದಾರೆ; ಯೆಹೋವನ ರೋಷವನ್ನೂ ನಿನ್ನ ದೇವರ ತರ್ಜನವನ್ನೂ ಹೊಟ್ಟೆ ತುಂಬಾ ಕುಡಿದಿದ್ದಾರೆ.
Kannada Bible (KNCL) BSI 2016
ನಿನ್ನ ಮಕ್ಕಳು ಬಿದ್ದರು ಬೀದಿ ಚೌಕಗಳಲಿ ಬಲೆಗೆ ಬಿದ್ದ ಜಿಂಕೆಮರಿಯಂತಿಹರು ಪ್ರಜ್ಞೆತಪ್ಪಿ. ನಿನ್ನ ದೇವರನು ಮೂದಲಿಸಿಹರು ಸರ್ವೇಶ್ವರನ ರೋಷವನ್ನನುಭವಿಸಿಹರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿನ್ನ ಪುತ್ರರು ಮೂರ್ಛೆ ಹೋಗಿ, ಬಲೆಗೆ ಸಿಕ್ಕಿದ ಕಾಡು ಗೂಳಿಗಳಂತೆ, ಎಲ್ಲಾ ಬೀದಿಗಳು ಕೂಡುವ ಚೌಕಗಳಲ್ಲಿ ಅವರು ಬಿದ್ದಿದ್ದಾರೆ. ಅವರು ಯೆಹೋವ ದೇವರ ರೋಷದಿಂದಲೂ, ನಿನ್ನ ದೇವರ ಗದರಿಕೆಯಿಂದಲೂ ತುಂಬಿದ್ದಾರೆ.