Isaiah 51:22 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಿನ್ನ ದೇವರೂ ಒಡೆಯನೂ ಆಗಿರುವ ಯೆಹೋವನು ತನ್ನ ಜನರಿಗಾಗಿ ಯುದ್ಧ ಮಾಡುವನು. ಅವನು ನಿನಗೆ ಹೇಳುವುದೇನೆಂದರೆ, “ಇಗೋ, ನಾನು ನಿನ್ನಿಂದ ವಿಷದ ಪಾತ್ರೆಯನ್ನು (ಶಿಕ್ಷೆ) ತೆಗೆದುಬಿಡುತ್ತೇನೆ. ಇನ್ನು ಮುಂದೆ ನನ್ನ ಸಿಟ್ಟಿನಿಂದ ನೀನು ಶಿಕ್ಷಿಸಲ್ಪಡುವದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿನ್ನ ಕರ್ತನೂ, ತನ್ನ ಜನರ ಪಕ್ಷವಾಗಿ ವ್ಯಾಜ್ಯವಾಡುವ ನಿನ್ನ ದೇವರೂ ಆದ ಯೆಹೋವನು ಹೀಗೆನ್ನುತ್ತಾನೆ, “ಇಗೋ, ಭ್ರಮಣಗೊಳಿಸುವ ಪಾನದ ಪಾತ್ರೆಯನ್ನು ಅಂದರೆ, ನನ್ನ ರೋಷದಿಂದ ತುಂಬಿರುವ ಬಟ್ಟಲನ್ನು ನಿನ್ನ ಕೈಯೊಳಗಿಂದ ತೆಗೆದುಹಾಕುವೆನು. ಅದನ್ನು ನೀನು ತಿರುಗಿ ಕುಡಿಯುವುದೇ ಇಲ್ಲ.
Kannada BSI Bible 2016
ತನ್ನ ಜನರಿಗೋಸ್ಕರ ವಾದಿಸುವ ನಿನ್ನ ದೇವರೂ ನಿನ್ನ ಕರ್ತನಾಗಿರುವ ಕರ್ತನೂ ಹೀಗನ್ನು ತ್ತಾನೆ--ಇಗೋ, ನಾನು ನಿನ್ನ ಕೈಯೊಳಗಿಂದ ತತ್ತರಿಸು ವಂಥ ಪಾತ್ರೆಯನ್ನೂ ನನ್ನ ಉಗ್ರವಾದ ಪಾತ್ರೆಯ ಮಡ್ಡಿಯನ್ನೂ ತೆಗೆದುಹಾಕಿದ್ದೇನೆ; ಇನ್ನು ಮೇಲೆ ನೀನು ಅದನ್ನು ತಿರಿಗಿ ಕುಡಿಯುವದೇ ಇಲ್ಲ.ಆದರೆ ನಾವು ಹಾದುಹೋಗುವಂತೆ ಬಗ್ಗಿಕೋ ಎಂದು ನಿನ್ನ ಪ್ರಾಣಕ್ಕೆ ಹೇಳಿ, ನಿನ್ನನ್ನು ಹಿಂಸಿಸಿದವನ ಕೈಯಲ್ಲಿ ಅದನ್ನು ನಾನು ಇಡುತ್ತೇನೆ; ನೀನು ಹಾದುಹೋಗುವ ವರಿಗೆ ನಿನ್ನ ಶರೀರವನ್ನು ನೆಲದಂತೆಯೂ ಬೀದಿ ಯಂತೆಯೂ ಇಟ್ಟಿಯಲ್ಲಾ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿನ್ನ ಕರ್ತನೂ ತನ್ನ ಜನರ ಪಕ್ಷವಾಗಿ ವ್ಯಾಜ್ಯವಾಡುವ ನಿನ್ನ ದೇವರೂ ಆದ ಯೇಹೋವನು ಹೀಗನ್ನುತ್ತಾನೆ - ಇಗೋ, ಭ್ರಮಣಗೊಳಿಸುವ ಪಾನದ ಪಾತ್ರೆಯನ್ನು ಅಂದರೆ ನನ್ನ ರೋಷವು ತುಂಬಿರುವ ಬಟ್ಟಲನ್ನು ನಿನ್ನ ಕೈಯೊಳಗಿಂದ ತೆಗೆದುಹಾಕುವೆನು; ಅದನ್ನು ನೀನು ಇನ್ನು ಕುಡಿಯೆ;
Kannada Bible (KNCL) BSI 2016
ಕೇಳು, ಸ್ವಾಮಿ ಸರ್ವೇಶ್ವರ ಆದ ನಾ ಹೇಳುವ ಮಾತನು: ತನ್ನ ಜನರ ಪರವಾಗಿ ವಾದಿಸುವ ನಿನ್ನ ದೇವರು ನಾನು; “ಇಗೋ, ಅಮಲೇರಿಸುವ ಪಾತ್ರೆಯನು ನನ್ನ ಕೋಪದಿಂದ ತುಂಬಿತುಳುಕುವಾ ಕೊಡವನು ನೀ ಕುಡಿಯಬಾರದೆಂದು ನಿನ್ನಿಂದ ತೆಗೆದುಬಿಡುವೆನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ತನ್ನ ಜನರಿಗೋಸ್ಕರ ವಾದಿಸುವ ನಿನ್ನ ದೇವರೂ, ನಿನ್ನ ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ, “ನಾನು ನಿನ್ನ ಕೈಯೊಳಗಿಂದ ತತ್ತರಿಸುವಂಥ ಪಾತ್ರೆಯನ್ನೂ, ನನ್ನ ಉಗ್ರವಾದ ಪಾತ್ರೆಯ ಮಡ್ಡಿಯನ್ನೂ ತೆಗೆದುಹಾಕಿದ್ದೇನೆ. ಇನ್ನು ಮೇಲೆ ನೀನು ಅದನ್ನು ತಿರುಗಿ ಕುಡಿಯುವುದೇ ಇಲ್ಲ.