Isaiah 51:23 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಈಗ ನನ್ನ ಕೋಪದ ದೆಸೆಯಿಂದ ನಿನಗೆ ಹಾನಿ ಮಾಡಿದವರನ್ನು ಶಿಕ್ಷಿಸುವೆನು. ಅವರು ನಿನ್ನನ್ನು ಕೊಲ್ಲಲು ಪ್ರಯತ್ನಿಸಿದರು. ‘ನಮ್ಮ ಮುಂದೆ ಸಾಷ್ಟಾಂಗಬೀಳು. ಆಗ ನಿನ್ನ ಮೇಲೆ ನಾವು ನಡೆಯುವೆವು’ ಎಂದು ಹೇಳಿದರು. ಅವರಿಗೆ ಅಡ್ಡಬೀಳಲು ನಿನ್ನನ್ನು ಬಲಾತ್ಕರಿಸಿದರು. ಆ ಬಳಿಕ ಅವರು ನೀನು ಮಣ್ಣಿನ ಧೂಳೋ ಎಂಬಂತೆ ನಿನ್ನ ಬೆನ್ನಿನ ಮೇಲೆ ನಡೆದಾಡಿದರು. ನೀನು ಅವರಿಗೆ ನಡೆಯಲು ಬೀದಿಯಾದಿ.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿನ್ನನ್ನು ಬಾಧಿಸುವವರ ಕೈಗೆ ಅದನ್ನು ಕೊಡುವೆನು. ಅವರು ನಿನಗೆ, ‘ನೀನು ಬಿದ್ದುಕೋ, ನಿನ್ನನ್ನು ತುಳಿಯುತ್ತಾ ಹೋಗುವೆವು’ ಎಂದು ಹೇಳಲು, ನೀನು ಹಾದುಹೋಗುವ ಅವರಿಗೆ ನಿನ್ನ ಬೆನ್ನನ್ನು ನೆಲವನ್ನಾಗಿಯೂ, ಬೀದಿಯ ಮಣ್ಣನ್ನಾಗಿಯೂ ಮಾಡಿಕೊಂಡೆಯಲ್ಲಾ.”
Kannada BSI Bible 2016
ಆದರೆ ನಾವು ಹಾದುಹೋಗುವಂತೆ ಬಗ್ಗಿಕೋ ಎಂದು ನಿನ್ನ ಪ್ರಾಣಕ್ಕೆ ಹೇಳಿ, ನಿನ್ನನ್ನು ಹಿಂಸಿಸಿದವನ ಕೈಯಲ್ಲಿ ಅದನ್ನು ನಾನು ಇಡುತ್ತೇನೆ; ನೀನು ಹಾದುಹೋಗುವ ವರಿಗೆ ನಿನ್ನ ಶರೀರವನ್ನು ನೆಲದಂತೆಯೂ ಬೀದಿ ಯಂತೆಯೂ ಇಟ್ಟಿಯಲ್ಲಾ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿನ್ನನ್ನು ಬಾಧಿಸುವವರ ಕೈಗೆ ಅದನ್ನು ಕೊಡುವೆನು; ಅವರು ನಿನಗೆ - ನೀನು ಬಿದ್ದುಕೋ, ನಿನ್ನನ್ನು ತುಳಿಯುತ್ತಾ ಹೋಗುವೆವು ಎಂದು ಹೇಳಲು ನೀನು ಹಾದುಹೋಗುವ ಅವರಿಗೆ ನಿನ್ನ ಬೆನ್ನನ್ನು ನೆಲವನ್ನಾಗಿಯೂ ಬೀದಿಯ ಮಣ್ಣನ್ನಾಗಿಯೂ ಮಾಡಿಕೊಂಡಿಯಲ್ಲಾ.
Kannada Bible (KNCL) BSI 2016
ಕೊಡುವೆ ಆ ಕೋಪದ ಕೊಡವನು ನಿನ್ನನು ಶೋಷಿಸಿದವರಿಗೆ ‘ನಾವು ತುಳಿದು ಹಾದುಹೋಗುವಂತೆ ನೆಲಕಚ್ಚಿ ಬೀಳು ಕೆಳಗೆ’ ಎಂದು ನಿಮ್ಮ ಬೆನ್ನನೆ ನೆಲವಾಗಿಸಿ, ಬೀದಿಕಸವನ್ನಾಗಿಸಿದವರಿಗೆ.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ನಾವು ಹಾದುಹೋಗುವಂತೆ, ನೀನು ನೆಲಕ್ಕೆ ಬೀಳು ಎಂದು ನಿನ್ನ ಪ್ರಾಣಕ್ಕೆ ಹೇಳಿ, ನಿನ್ನನ್ನು ಹಿಂಸಿಸಿದವನ ಕೈಯಲ್ಲಿ ಅದನ್ನು ನಾನು ಇಡುತ್ತೇನೆ ಮತ್ತು ನೀನು ಹಾದುಹೋದವರಿಗೆ ನಿನ್ನ ಶರೀರವನ್ನು ನೆಲದಂತೆಯೂ, ಬೀದಿಯಂತೆಯೂ ಮಾಡಿಕೊಂಡಿಯಲ್ಲಾ.”