Isaiah 51:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯಾಕೆಂದರೆ ನುಸಿಯು ಅವರನ್ನು ಬಟ್ಟೆಯಂತೆ ತಿಂದುಹಾಕುವುದು. ಅವರು ಉಣ್ಣೆಯಂತಿರುವರು, ನುಸಿಯು ಅದನ್ನು ತಿಂದುಬಿಡುವುದು. ಆದರೆ ನನ್ನ ಒಳ್ಳೆಯತನವು ಶಾಶ್ವತವಾದದ್ದು. ನನ್ನ ರಕ್ಷಣೆಯು ಸದಾಕಾಲವಿರುವುದು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನುಸಿಯು ಅವರನ್ನು ಬಟ್ಟೆಯಂತೆ ತಿಂದುಹಾಕುವುದು, ಹುಳವು ಅವರನ್ನು ಉಣ್ಣೆಯಂತೆ ತಿಂದುಬಿಡುವುದು. ನನ್ನ ರಕ್ಷಣಧರ್ಮದ ಕಾರ್ಯವೋ ಶಾಶ್ವತವಾಗಿ ನಿಲ್ಲುವುದು. ನನ್ನ ವಿಮೋಚನ ಕ್ರಿಯೆಯು ತಲತಲಾಂತರಕ್ಕೂ ನೆಲೆಯಾಗಿರುವುದು.”
Kannada BSI Bible 2016
ನುಸಿಯು ಬಟ್ಟೆಯನ್ನು ತಿನ್ನುವಂತೆ ಅವರನ್ನು ತಿಂದುಬಿಡುವದು ಮತ್ತು ಹುಳವು ಅವರನ್ನು ಉಣ್ಣೆ ಯಂತೆ ತಿನ್ನುವದು; ಆದರೆ ನನ್ನ ನೀತಿಯು ಶಾಶ್ವತವಾಗಿ ರುವದು ಮತ್ತು ನನ್ನ ರಕ್ಷಣೆಯು ತಲತಲಾಂತರ ಗಳಿಗೂ ಇರುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ನನ್ನ ರಕ್ಷಣ ಧರ್ಮದ ಕಾರ್ಯವೋ ಶಾಶ್ವತವಾಗಿ ನಿಲ್ಲುವದು, ನನ್ನ ವಿಮೋಚನ ಕ್ರಿಯೆಯು ತಲತಲಾಂತರಕ್ಕೂ ನೆಲೆಯಾಗಿರುವದು.
Kannada Bible (KNCL) BSI 2016
ನುಸಿ ಅವರನ್ನು ತಿಂದುಹಾಕುವುದು ಬಟ್ಟೆಯಂತೆ ಹುಳು ಅವರನ್ನು ಮೆದ್ದುಬಿಡುವುದು ಉಣ್ಣೆಯಂತೆ. ನಾ ನೀಡುವ ಮುಕ್ತಿಯೋ ನಿಲ್ಲುವುದು ಶಾಶ್ವತವಾಗಿ ನಾ ಕೊಡುವ ವಿಮೋಚನೆ ಸದಾ ಇರುವುದು ನೆಲೆಯಾಗಿ.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಏಕೆಂದರೆ ನುಸಿಯು ಬಟ್ಟೆಯನ್ನು ತಿನ್ನುವಂತೆ, ಅವರನ್ನು ತಿಂದುಬಿಡುವುದು ಮತ್ತು ಹುಳವು ಅವರನ್ನು ಉಣ್ಣೆಯಂತೆ ತಿನ್ನುವುದು. ಆದರೆ ನನ್ನ ನೀತಿಯು ಶಾಶ್ವತವಾಗಿರುವುದು ಮತ್ತು ನನ್ನ ರಕ್ಷಣೆಯು ತಲತಲಾಂತರಗಳಿಗೂ ಇರುವುದು.