Isaiah 52:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಈಗ ನೋಡು, ಸಂಭವಿಸಿದ್ದನ್ನು ಗಮನಿಸು. ಇನ್ನೊಂದು ಜನಾಂಗವು ಅವರನ್ನು ಗುಲಾಮರನ್ನಾಗಿ ಮಾಡಿತು. ಈ ದೇಶವು ನನ್ನ ಜನರನ್ನು ತೆಗೆದುಕೊಂಡು ಹೋಗಲು ಹಣ ಕೊಡಲಿಲ್ಲ. ಈ ದೇಶವು ನನ್ನ ಜನರ ಮೇಲೆ ದಬ್ಬಾಳಿಕೆ ನಡಿಸಿ ನಕ್ಕಿತ್ತು. ಈಗ ಜನರು ನನ್ನನ್ನೂ ನನ್ನ ಹೆಸರನ್ನೂ ಯಾವಾಗಲೂ ಗೇಲಿ ಮಾಡುತ್ತಾರೆ.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕರ್ತನಾದ ಯೆಹೋವನು ಹೇಳುವುದೇನೆಂದರೆ, “ಈಗಲೂ ಅನ್ಯರು ನನ್ನ ಜನರನ್ನು ಕಾರಣವಿಲ್ಲದೆ ಸೆರೆತೆಗೆದುಕೊಂಡು ಹೋಗಿರುವಾಗ ನಾನು ಇಲ್ಲಿ ಸುಮ್ಮನಿರುವುದು ಹೇಗೆ? ನನ್ನ ಪ್ರಜೆಯನ್ನು ಆಳುವವರು ರೌದ್ರದಿಂದ ಅರಚುತ್ತಾರೆ. ನನ್ನ ನಾಮವು ದಿನವೆಲ್ಲಾ ಎಡೆಬಿಡದೆ ದೂಷಣೆಗೆ ಗುರಿಯಾಗಿದೆ.
Kannada BSI Bible 2016
ಹಾಗಾದರೆ ಈಗ ಕರ್ತನು ಹೇಳುವದೇನಂದರೆ ನನಗೆ ಇಲ್ಲಿ ಏನಿದೆ? ನನ್ನ ಜನರು ಏನೂ ಇಲ್ಲದೆ ಒಯ್ಯಲ್ಪಟ್ಟಿದ್ದಾರಲ್ಲಾ; ಆಳುವವರು ಅವರನ್ನು ಗೋಳಾಡಿಸುತ್ತಾರಲ್ಲಾ ಮತ್ತು ನನ್ನ ಹೆಸರು ಪ್ರತಿದಿನವೂ ಎಡೆಬಿಡದೇ ದೂಷಣೆಗೆ ಗುರಿಯಾಗಿದೆ ಎಂದು ಕರ್ತನು ಹೇಳುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಈಗಲೂ ಅನ್ಯರು ನನ್ನ ಜನರನ್ನು ಹಕ್ಕಿಲ್ಲದೆ ಒಯ್ದಿರಲು ನಾನು ಇಲ್ಲಿ ಸುಮ್ಮನಿರುವದು ಹೇಗೆ? ನನ್ನ ಪ್ರಜೆಯನ್ನು ಆಳುವವರು [ರೌದ್ರದಿಂದ] ಕಿರಚುತ್ತಾರೆ; ನನ್ನ ನಾಮವು ದಿನವೆಲ್ಲಾ ಎಡೆಬಿಡದೆ ದೂಷಣೆಗೆ ಗುರಿಯಾಗಿದೆ.
Kannada Bible (KNCL) BSI 2016
ಈಗಲೂ ಅನ್ಯರು ನನ್ನ ಜನರನ್ನು ಕಾರಣವಿಲ್ಲದೆ ಕರೆದೊಯ್ದಿದ್ದಾರೆ. ಇಲ್ಲಿ ನಾನು ಸುಮ್ಮನಿರುವುದಾದರೂ ಹೇಗೆ? ಆಳುತ್ತಿರುವವರು ನನ್ನ ಪ್ರಜೆಯಾದವರನ್ನು ಗೋಳಿಡಿಸುತ್ತಿದ್ದಾರೆ, ಎಡೆಬಿಡದೆ ನನ್ನ ಶ್ರೀ ನಾಮವು ದಿನವೆಲ್ಲ ದೂಷಣೆಗೆ ಗುರಿಯಾಗುತ್ತಿದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಈಗ ನನಗೆ ಇಲ್ಲಿ ಏನಿದೆ?” ಎಂದು ಯೆಹೋವ ದೇವರು ಹೇಳುತ್ತಾರೆ. “ನನ್ನ ಜನರನ್ನು ವ್ಯರ್ಥವಾಗಿ ಒಯ್ದಿದ್ದಾರೆ. ಆಳುವವರು ಅವರನ್ನು ಗೋಳಾಡಿಸುತ್ತಿದ್ದಾರೆ. ನನ್ನ ನಾಮವು ಪ್ರತಿದಿನವೂ ಎಡೆಬಿಡದೆ ದೂಷಣೆಗೆ ಗುರಿಯಾಗಿದೆ! ಎಂದು ಯೆಹೋವ ದೇವರು ಹೇಳುತ್ತಾರೆ.