Isaiah 52:6 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನು ಹೇಳುವುದೇನೆಂದರೆ, “ಜನರು ನನ್ನನ್ನು ತಿಳಿದುಕೊಳ್ಳಲೆಂದು ಹೀಗಾಯಿತು. ನಾನು ಯಾರೆಂದು ನನ್ನ ಜನರಿಗೆ ಗೊತ್ತಾಗುವದು. ನನ್ನ ಜನರಿಗೆ ನನ್ನ ಹೆಸರಿನ ಪರಿಚಯವಾಗುವದು. “ನಾನೇ” ಎಂಬಾತನಾದ ನಾನೇ ಅವರ ಸಂಗಡ ಮಾತನಾಡುತ್ತಿದ್ದೇನೆ ಎಂದು ಅವರಿಗೆ ಗೊತ್ತಾಗುವದು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೀಗಿರಲು ನನ್ನ ಜನರು ನನ್ನ ನಾಮದ ಮಹತ್ತನ್ನು ತಿಳಿದುಕೊಳ್ಳುವರು. ಹೀಗೆ ಆ ದಿನದಲ್ಲಿ ಅವರ ಸಂಗಡ ಮಾತನಾಡಿದವನು ನಾನೇ. ಹೌದು ನಾನೇ” ಎಂದು ಗ್ರಹಿಸಿಕೊಳ್ಳುವ ಹಾಗೆ ಮಾಡುವೆನು.
Kannada BSI Bible 2016
ಆದದರಿಂದ ನನ್ನ ಜನರು ನನ್ನ ಹೆಸರನ್ನು ತಿಳಿದುಕೊಳ್ಳುವರು; ಹೀಗೆ ಆ ದಿನದಲ್ಲಿ ಮಾತನಾಡಿದಾತನು ನಾನೇ, ಇಗೋ, ಅದು ನಾನೇ ಎಂದು ಅವರು ಗ್ರಹಿಸುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೀಗಿರಲು ನನ್ನ ಜನರು ನನ್ನ ನಾಮದ ಮಹತ್ತನ್ನು ತಿಳಿದು [ತಮ್ಮ ಸಂಗಡ] ಮಾತಾಡುವವನು ನಾನೇ, ಹೌದು ನಾನೇ, ಎಂದು [ರಕ್ಷಣೆಯ] ಆ ದಿನದಲ್ಲಿ ಗ್ರಹಿಸಿಕೊಳ್ಳುವ ಹಾಗೆ ಮಾಡುವೆನು. ಇದೇ ಯೆಹೋವನ ನುಡಿ.
Kannada Bible (KNCL) BSI 2016
ಹೀಗಿರಲು ನನ್ನ ಜನರು ನನ್ನ ನಾಮದ ಮಹತ್ವವನ್ನು ಒಂದು ದಿನ ಅರಿತುಕೊಳ್ಳುವರು.” ಇದು ಸರ್ವೇಶ್ವರ ಸ್ವಾಮಿಯ ನುಡಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದ್ದರಿಂದ ನನ್ನ ಜನರು ನನ್ನ ಹೆಸರನ್ನು ತಿಳಿದುಕೊಳ್ಳುವರು. ಹೀಗೆ ಆ ದಿನದಲ್ಲಿ ಮಾತನಾಡಿದಾತನು ನಾನೇ, ಅದು ನಾನೇ ಎಂದು ಅವರು ಗ್ರಹಿಸುವರು.”