Isaiah 57:1 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನೀತಿವಂತರು ಇಲ್ಲವಾಗುವರು; ಯಾರೂ ಅದನ್ನು ಗಮನಿಸರು. ಸದ್ಭಕ್ತರು ಗತಿಸಿಹೋಗುವರು; ಅದಕ್ಕೆ ಕಾರಣವೇನೆಂದು ಯಾರೂ ಗ್ರಹಿಸರು. ಕೇಡಿನಿಂದ ಪಾರಾಗಲೆಂದೇ ಸದ್ಭಕ್ತರಿಗೆ ಹೀಗಾಯಿತು ಎಂದು ಯಾರೂ ಯೋಚಿಸರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸಜ್ಜನರು ನಾಶವಾಗುತ್ತಾರೆ, ಯಾರೂ ಮನಸ್ಸಿಗೆ ತಾರರು; ಸದ್ಭಕ್ತರು ಗತಿಸುತ್ತಾರೆ, ಆಹಾ, ಶಿಷ್ಟರು ಕೇಡಿನಿಂದ ಪಾರಾಗಿದ್ದಾರೆ ಎಂದು ಯಾರೂ ಯೋಚಿಸರು.
Kannada BSI Bible 2016
ನೀತಿವಂತನು ನಾಶವಾಗುವನು, ಅದನ್ನು ಯಾವ ಮನುಷ್ಯನು ಮನಸ್ಸಿಗೆ ತಾರನು. ಕರುಣೆಯುಳ್ಳ ಮನುಷ್ಯರು ತೆಗೆದುಹಾಕಲ್ಪಡುವರು, ನೀತಿವಂತನು ಮುಂದೆ ಬರುವ ಕೇಡಿನಿಂದ ಪಾರಾಗು ತ್ತಾನೆಂಬದನ್ನು ಯಾರೂ ಯೋಚಿಸರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸಜ್ಜನರು ನಾಶವಾಗುತ್ತಾರೆ, ಯಾರೂ ಮನಸ್ಸಿಗೆ ತಾರರು; ಸದ್ಭಕ್ತರು ಗತಿಸುತ್ತಾರೆ, ಆಹಾ, ಶಿಷ್ಟರು ಕೇಡಿನಿಂದ ಪಾರಾಗಿದ್ದಾರೆ ಎಂದು ಯಾರೂ ಯೋಚಿಸರು.
Kannada Bible (KNCL) BSI 2016
ಸಜ್ಜನರು ಸಾಯುತ್ತಾರೆ, ಆದರೆ ಯಾರೂ ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. ಶರಣರು ಕಣ್ಮರೆಯಾಗುತ್ತಾರೆ, ‘ಇವರು ಕೇಡಿನಿಂದ ಪಾರಾದರು’ ಎಂದು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀತಿವಂತನು ನಾಶವಾಗುವನು ಆದರೆ ಯಾರೂ ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. ಭಕ್ತಿಯುಳ್ಳ ಮನುಷ್ಯರು ಕಣ್ಮರೆಯಾಗುವರು. ನೀತಿವಂತನು ಮುಂದೆ ಬರುವ ಕೇಡಿನಿಂದ ಪಾರಾದರು ಎಂಬುದನ್ನು ಯಾರೂ ಯೋಚಿಸರು.