Isaiah 57:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಇವುಗಳನ್ನೆಲ್ಲಾ ನೀವು ಬಹು ಪ್ರಯಾಸದಿಂದ ಮಾಡಿದರೂ ಆಯಾಸಗೊಂಡಿಲ್ಲ. ಯಾಕೆಂದರೆ ಇವುಗಳನ್ನು ಮಾಡುವುದರಲ್ಲೇ ನಿಮಗೆ ಸಂತೋಷ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು ನಡೆದು ನಡೆದು ಆಯಾಸಗೊಂಡರೂ ದಿಕ್ಕಿಲ್ಲವಲ್ಲಾ ಅಂದುಕೊಳ್ಳಲಿಲ್ಲ; ಹೊಸ ಬಲವನ್ನು ತಂದುಕೊಂಡಿ; ಆದುದರಿಂದ ನೀನು ಸೋತುಹೋಗಲಿಲ್ಲ.
Kannada BSI Bible 2016
ನಿನ್ನ ಮಾರ್ಗದಲ್ಲಿ ಬಹಳವಾಗಿ ದಣಿದಿದ್ದರೂ ನಿರೀಕ್ಷೆಯೇ ಇಲ್ಲ ಎಂದು ಅಂದುಕೊಳ್ಳಲಿಲ್ಲ. ನಿನ್ನ ಕೈಯಲ್ಲಿರುವ ಜೀವವನ್ನು ಕಂಡುಕೊಂಡಿದ್ದೀ, ಆದದರಿಂದ ನೀನು ದುಃಖಿಸಲಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ನಡೆದು ನಡೆದು ಆಯಾಸಗೊಂಡರೂ ದಿಕ್ಕಿಲ್ಲವಲ್ಲಾ ಅಂದುಕೊಳ್ಳಲಿಲ್ಲ; ಹೊಸ ಬಲವನ್ನು ತಂದುಕೊಂಡಿ; ಆದದರಿಂದ ನೀನು ಸೋತುಹೋಗಲಿಲ್ಲ.
Kannada Bible (KNCL) BSI 2016
ನಡೆದು ನಡೆದು ದಣಿದಿದ್ದರೂ ‘ಇನ್ನು ಪ್ರಯೋಜನವಿಲ್ಲ’ ಎಂದುಕೊಳ್ಳಲಿಲ್ಲ. ಹೊಸ ಚೈತನ್ಯವನ್ನು ತಂದುಕೊಂಡು ನಿಲ್ಲದೆ ಮುಂದುವರೆದಿರುವೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿನ್ನ ಮಾರ್ಗದಲ್ಲಿ ಬಹಳವಾಗಿ ದಣಿದಿದ್ದರೂ, ‘ಏನೂ ಪ್ರಯೋಜನವಿಲ್ಲ,’ ಎಂದುಕೊಳ್ಳಲಿಲ್ಲ. ನೀನು ಹೊಸ ಬಲವನ್ನು ತಂದುಕೊಂಡು, ಬೇಸರಗೊಳ್ಳದೆ ಮುಂದುವರೆದಿರುವೆ.