Isaiah 57:16 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾನು ನಿತ್ಯಕಾಲಕ್ಕೂ ಯುದ್ಧ ಮಾಡುವವನಲ್ಲ. ನಾನು ಎಂದೆಂದಿಗೂ ಕೋಪಗೊಳ್ಳುವವನಲ್ಲ. ನಾನು ಹಾಗೆ ಮಾಡುವವನಾದರೆ ನಾನು ಕೊಟ್ಟಿರುವ ಮನುಷ್ಯನ ಆತ್ಮವು ನನ್ನ ಮುಂದೆಯೇ ಸಾಯುವದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಸರ್ವದಾ ವ್ಯಾಜ್ಯವಾಡುವುದಿಲ್ಲ, ಕಡೆಯ ತನಕ ಕೋಪಿಸಿಕೊಳ್ಳೆನು, ಹೀಗೆ ಮಾಡಿದರೆ ಮನುಷ್ಯನ ಆತ್ಮವೂ, ನಾನು ಸೃಷ್ಟಿಸಿದ ಜೀವವೂ ನನ್ನಿಂದ ಕುಂದಿಹೋದಾವು.
Kannada BSI Bible 2016
ನಾನು ಎಂದೆಂದಿಗೂ ವ್ಯಾಜ್ಯ ವಾಡುವದಿಲ್ಲ, ಇಲ್ಲವೆ ಯಾವಾಗಲೂ ಕೋಪಿಸಿ ಕೊಳ್ಳೆನು. ಯಾಕಂದರೆ ಆತ್ಮವೂ ನಾನು ಉಂಟು ಮಾಡಿದ ಜೀವವೂ ನನ್ನಿಂದ ಕುಂದಿ ಹೋದಾವು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಸರ್ವದಾ ವ್ಯಾಜ್ಯವಾಡೆನು, ಕಡೆಯ ತನಕ ಕೋಪಿಸಿಕೊಳ್ಳೆನು, ಹೀಗೆ ಮಾಡಿದರೆ ಮನುಷ್ಯಾತ್ಮವೂ ನಾನು ಸೃಷ್ಟಿಸಿದ ಜೀವವೂ ನನ್ನಿಂದ ಕುಂದಿಹೋದಾವು.
Kannada Bible (KNCL) BSI 2016
ನಾನು ಸರ್ವದಾ ತಪ್ಪು ಹುಡುಕುವವನಲ್ಲ; ಕಡೆಯ ತನಕ ಕೋಪದಿಂದಿರುವವನಲ್ಲ. ಹಾಗೆ ಮಾಡಿದರೆ ಜೀವಾತ್ಮ ಕುಂದಿಹೋದೀತು. ಆ ಜೀವಿಗಳನ್ನು ಸೃಷ್ಟಿಸಿದವನು ನಾನೇ ಅಲ್ಲವೇ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಎಂದೆಂದಿಗೂ ವ್ಯಾಜ್ಯವಾಡುವುದಿಲ್ಲ. ಯಾವಾಗಲೂ ಕೋಪಿಸಿಕೊಳ್ಳೆನು. ಏಕೆಂದರೆ ಆತ್ಮವೂ, ನಾನು ಉಂಟುಮಾಡಿದ ಜೀವವೂ ನನ್ನಿಂದ ಕುಂದಿ ಹೋದಾವು.