Isaiah 57:2 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದರೆ ಶಾಂತಿಸಮಾಧಾನಗಳು ಬರುತ್ತವೆ. ಆಗ ಜನರು ತಮ್ಮ ಸ್ವಂತ ಹಾಸಿಗೆಗಳ ಮೇಲೆ ವಿಶ್ರಮಿಸಿಕೊಳ್ಳುವರು; ದೇವರು ಅಪೇಕ್ಷಿಸುವ ರೀತಿಯಲ್ಲಿ ಜೀವಿಸುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇವರು ಸಮಾಧಾನದಲ್ಲಿ ಸೇರಿದ್ದಾರಲ್ಲಾ; ನೀತಿಯುಳ್ಳವನಾಗಿ ನಡೆಯುವ ಪ್ರತಿಯೊಬ್ಬನು ತನ್ನ ತನ್ನ ದೀರ್ಘನಿದ್ರಾಸ್ಥಾನದಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದಾನೆ.
Kannada BSI Bible 2016
ಅವನು ಸಮಾಧಾನಕ್ಕೆ ಪ್ರವೇಶಿಸುತ್ತಾನೆ. ಅವರಲ್ಲಿ ನೆಟ್ಟಗೆ ನಡೆಯುವ ಪ್ರತಿಯೊಬ್ಬನು ತನ್ನ ಹಾಸಿಗೆಯಲ್ಲಿ ವಿಶ್ರಮಿಸಿಕೊಳ್ಳುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವರು ಸಮಾಧಾನದಲ್ಲಿ ಸೇರಿದ್ದಾರಲ್ಲಾ; ನೆಟ್ಟಗೆ ನಡೆಯುವ ಪ್ರತಿಯೊಬ್ಬನು ತನ್ನ ತನ್ನ ದೀರ್ಘನಿದ್ರಾಸ್ಥಾನದಲ್ಲಿ ವಿಶ್ರವಿುಸಿಕೊಳ್ಳುತ್ತಿದ್ದಾನೆ.
Kannada Bible (KNCL) BSI 2016
ಸನ್ಮಾರ್ಗದಲ್ಲಿ ನಡೆಯುವವರು ಶಯ್ಯೆಯಲ್ಲಿ ವಿಶ್ರಮಿಸುತ್ತಾರೆ; ಶಾಂತಿಸಮಾಧಾನವನ್ನು ಸೇರುತ್ತಾರೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಸಮಾಧಾನಕ್ಕೆ ಪ್ರವೇಶಿಸುತ್ತಾರೆ. ಅವರಲ್ಲಿ ನೆಟ್ಟಗೆ ನಡೆಯುವ ಪ್ರತಿಯೊಬ್ಬರೂ ತಮ್ಮ ಮರಣದ ಹಾಸಿಗೆಗಳಲ್ಲಿ ವಿಶ್ರಮಿಸಿಕೊಳ್ಳುತ್ತಾರೆ.