Isaiah 59:20 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಗ ಒಬ್ಬ ರಕ್ಷಕನು ಚೀಯೋನಿಗೆ ಬರುವನು. ಜನರು ಪಾಪಮಾಡಿದ್ದರೂ ದೇವರ ಬಳಿಗೆ ಹಿಂತಿರುಗಿ ಬಂದ ಯಾಕೋಬನ ಜನರ ಬಳಿಗೆ ಆತನು ಬರುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಒಬ್ಬ ವಿಮೋಚಕನು ಚೀಯೋನಿಗೂ, ದ್ರೋಹವನ್ನು ಬಿಟ್ಟುಬಿಟ್ಟ ಯಾಕೋಬ್ಯರ ಬಳಿಗೂ ಬರುವನು”, ಯೆಹೋವನೇ ಇದನ್ನು ನುಡಿದಿದ್ದಾನೆ.
Kannada BSI Bible 2016
ವಿಮೋಚಕನು ಚೀಯೋನಿಗೂ ಯಾಕೋಬ್ಯರಲ್ಲಿ ತಮ್ಮ ದ್ರೋಹದಿಂದ ತಿರುಗುವವರಿಗೂ ಬರುವೆ ನೆಂದು ಕರ್ತನು ಅನ್ನುತ್ತಾನೆ.ಕರ್ತನು ಹೇಳುವದೇ ನಂದರೆ--ನಾನಾದರೋ ಅವರ ಸಂಗಡ ಮಾಡುವ ಒಡಂಬಡಿಕೆ ಇದೇ--ನಿನ್ನ ಮೇಲಿರುವ ನನ್ನ ಆತ್ಮನೂ ನಾನು ನಿನ್ನ ಬಾಯಲ್ಲಿ ಇಟ್ಟಿರುವ ನನ್ನ ವಾಕ್ಯಗಳೂ ಇಂದಿನಿಂದ ಸದಾಕಾಲಕ್ಕೆ ನಿನ್ನ ಬಾಯಿಂದಲೂ ನಿನ್ನ ಸಂತಾನದ ಬಾಯಿಂದಲೂ ನಿನ್ನ ಸಂತತಿಯ ಸಂತಾ ನದ ಬಾಯಿಂದಲೂ ತೊಲಗುವದಿಲ್ಲವೆಂದು ಕರ್ತನು ಹೇಳುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೆ ಚೀಯೋನಿಗೂ ದ್ರೋಹವನ್ನು ಬಿಟ್ಟುಬಿಟ್ಟ ಯಾಕೋಬ್ಯರ ಬಳಿಗೂ ವಿಮೋಚಕನಾಗಿ ಬರುವನು. ಯೆಹೋವನೇ ಇದನ್ನು ನುಡಿದಿದ್ದಾನೆ.
Kannada Bible (KNCL) BSI 2016
ಸರ್ವೇಶ್ವರ ಸ್ವಾಮಿ ಜನರಿಗೆ ಹೀಗೆನ್ನುತ್ತಾರೆ: “ಸಿಯೋನಿಗೆ ಹಾಗೂ ಪಾಪವನ್ನು ತೊರೆದುಬಿಟ್ಟ ಯಕೋಬ್ಯರ ಬಳಿಗೆ ನಾನು ಉದ್ಧಾರಕನಾಗಿ ಬರುವೆನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ವಿಮೋಚಕನು ಚೀಯೋನಿಗೂ ಯಾಕೋಬಿನಲ್ಲಿ ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಡುವವರಿಗಾಗಿಯೂ ಬರುವನು,” ಎಂದು ಯೆಹೋವ ದೇವರು ಹೇಳುತ್ತಾರೆ.