Isaiah 59:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವರಿಗೆ ಸಮಾಧಾನದ ದಾರಿಯೇ ತಿಳಿಯದು. ಅವರ ಜೀವಿತದಲ್ಲಿ ಒಳ್ಳೆಯತನವೆಂಬುದು ಇಲ್ಲ. ಅವರ ಮಾರ್ಗವು ಕಪಟತನದಿಂದ ತುಂಬಿದೆ. ಅವರಂತೆ ಜೀವಿಸುವವರಿಗೆ ಶಾಂತಿಯೇ ಇರದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇವರು ಸಮಾಧಾನದ ಮಾರ್ಗವನ್ನೇ ಅರಿಯರು, ಇವರ ಹಾದಿಗಳಲ್ಲಿ ಯಾವ ನ್ಯಾಯವೂ ಇಲ್ಲ, ತಮ್ಮ ಮಾರ್ಗಗಳನ್ನು ಡೊಂಕು ಮಾಡಿಕೊಂಡಿದ್ದಾರೆ, ಅವುಗಳಲ್ಲಿ ನಡೆಯುವವರು ಸಮಾಧಾನವನ್ನು ಅರಿಯರು.
Kannada BSI Bible 2016
ಸಮಾ ಧಾನದ ಮಾರ್ಗವನ್ನರಿಯರು; ಅವರ ದಾರಿಗಳಲ್ಲಿ ನ್ಯಾಯವಿಲ್ಲ; ತಮ್ಮ ಹಾದಿಗಳನ್ನು ಡೊಂಕು ಮಾಡಿ ಕೊಂಡಿದ್ದಾರೆ; ಅವುಗಳಲ್ಲಿ ನಡೆಯುವವರೆಲ್ಲರು ಸಮಾ ಧಾನವನ್ನರಿಯರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವರು ಸಮಾಧಾನದ ಮಾರ್ಗವನ್ನೇ ಅರಿಯರು, ಇವರ ಹಾದಿಗಳಲ್ಲಿ ಯಾವ ನ್ಯಾಯವೂ ಇಲ್ಲ, ತಮ್ಮ ಮಾರ್ಗಗಳನ್ನು ವಕ್ರಮಾಡಿಕೊಂಡಿದ್ದಾರೆ, ಅವುಗಳಲ್ಲಿ ನಡೆಯುವ ಯಾವನೂ ಸಮಾಧಾನವನ್ನರಿಯನು.
Kannada Bible (KNCL) BSI 2016
ಶಾಂತಿಸಮಾಧಾನದ ಮಾರ್ಗವನ್ನು ನೀವು ಅರಿಯಿರಿ. ನಿಮ್ಮ ನಡತೆಯಲ್ಲಿ ನ್ಯಾಯನೀತಿ ಎಂಬುದು ಇಲ್ಲ. ನಿಮ್ಮ ಮಾರ್ಗ ಅಂಕುಡೊಂಕಾಗಿದೆ, ಅವುಗಳಲ್ಲಿ ನಡೆಯುವವನು ಶಾಂತಿಸಮಾಧಾನವನ್ನು ಮುಟ್ಟನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸಮಾಧಾನದ ಮಾರ್ಗವನ್ನೇ ಅವರು ಅರಿಯರು. ಅವರ ದಾರಿಗಳಲ್ಲಿ ನ್ಯಾಯವಿಲ್ಲ. ತಮ್ಮ ಹಾದಿಗಳನ್ನು ವಕ್ರಮಾಡಿಕೊಂಡಿದ್ದಾರೆ. ಅವುಗಳಲ್ಲಿ ನಡೆಯುವವರೆಲ್ಲರೂ ಸಮಾಧಾನವನ್ನರಿಯರು.