Isaiah 60:2 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಕತ್ತಲೆಯು ಈಗ ಭೂಮಿಯನ್ನು ಕವಿದಿದೆ. ಜನರು ಕತ್ತಲೆಯಲ್ಲಿದ್ದಾರೆ. ಆದರೆ ಯೆಹೋವನ ಪ್ರಕಾಶವು ನಿನ್ನ ಮೇಲಿರುವದು. ಆತನ ಮಹಿಮೆಯು ನಿನ್ನ ಮೇಲೆ ಬರುವದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಗೋ, ಕತ್ತಲು ಭೂಮಿಯನ್ನು ಆವರಿಸಿದೆ, ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ; ನಿನ್ನ ಮೇಲಾದರೋ ಯೆಹೋವನು ಉದಯಿಸುವನು, ಆತನ ತೇಜಸ್ಸು ನಿನ್ನಲ್ಲಿ ಕಾಣಿಸುವುದು.
Kannada BSI Bible 2016
ಇಗೋ, ಕತ್ತಲೆ ಭೂಮಿಯನ್ನೂ ಗಾಢಾಂಧಕಾರವು ಜನಗಳನ್ನೂ ಮುಚ್ಚುವದು; ಆದರೆ ನಿನ್ನ ಮೇಲೆ ಕರ್ತನು ಉದಯಿ ಸುವನು; ಆತನ ಮಹಿಮೆಯು ನಿನ್ನ ಮೇಲೆ ಕಾಣ ಬರುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಗೋ, ಕತ್ತಲು ಭೂವಿುಯನ್ನು ಆವರಿಸಿದೆ, ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ; ನಿನ್ನ ಮೇಲಾದರೋ ಯೆಹೋವನು ಉದಯಿಸುವನು, ಆತನ ತೇಜಸ್ಸು ನಿನ್ನಲ್ಲಿ ಕಾಣಿಸುವದು.
Kannada Bible (KNCL) BSI 2016
ಇಗೋ ಜಗತ್ತನು ಮುತ್ತಿದೆ ಕತ್ತಲು ಜನಾಂಗಗಳನು ಆವರಿಸಿದೆ ಕಾರ್ಗತ್ತಲು. ನಿನ್ನ ಮೇಲಾದರೋ ಉದಯಿಸುವನು ಸರ್ವೇಶ್ವರನು ನಿನ್ನಲ್ಲಿ ಗೋಚರವಾಗುವುದು ಆತನಾ ತೇಜಸ್ಸು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಗೋ, ಕತ್ತಲೆ ಭೂಮಿಯನ್ನೂ, ಗಾಢಾಂಧಕಾರವು ಜನರನ್ನೂ ಮುಚ್ಚುವುದು. ಆದರೆ ನಿನ್ನ ಮೇಲೆ ಯೆಹೋವ ದೇವರು ಉದಯಿಸುವರು. ಆತನ ಮಹಿಮೆಯು ನಿನ್ನ ಮೇಲೆ ಕಾಣಬರುವುದು.