Isaiah 61:6 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ನಿಮ್ಮನ್ನು ‘ಯೆಹೋವನ ಯಾಜಕರು’ ಎಂತಲೂ ‘ದೇವರ ಸಹಾಯಕರು’ ಎಂತಲೂ ಕರೆಯುವರು. ಭೂಲೋಕದ ಎಲ್ಲಾ ದೇಶಗಳ ಐಶ್ವರ್ಯವು ನಿಮ್ಮ ಕೈಸೇರುವುದರಿಂದ ನೀವು ಹೆಚ್ಚಳಪಡುವಿರಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀವೋ ಯೆಹೋವನ ಯಾಜಕರೆಂಬ ಬಿರುದನ್ನು ಹೊಂದುವಿರಿ, ಜನರು ನಿಮ್ಮನ್ನು ನಮ್ಮ ದೇವರ ಸೇವಕರು ಎಂದು ಕರೆಯುವರು; ಜನಾಂಗಗಳ ಆಸ್ತಿಯನ್ನು ಅನುಭವಿಸುವಿರಿ, ಅವುಗಳ ವೈಭವವನ್ನು ಪಡೆದು ಹೊಗಳಿಕೊಳ್ಳುವಿರಿ.
Kannada BSI Bible 2016
ಆದರೆ ನಿಮಗೆ ಕರ್ತನ ಯಾಜಕರೆಂದು ಹೆಸರಿಡುವರು ನೀವು ನಮ್ಮ ದೇವರ ಸೇವಕರೆಂದು ಜನರು ಕರೆಯುವರು. ಜನಾಂಗಗಳ ಆಸ್ತಿಯನ್ನು ಅನುಭವಿಸುವಿರಿ; ಅವರ ಮಹಿಮೆಯಲ್ಲಿ ನೀವು ಹೆಚ್ಚಳಪಡುವಿರಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀವೋ ಯೆಹೋವನ ಯಾಜಕರೆಂಬ ಬಿರುದನ್ನು ಹೊಂದುವಿರಿ, ಜನರು ನಿಮ್ಮನ್ನು ನಮ್ಮ ದೇವರ ಸೇವಕರು ಎಂದು ಕರೆಯುವರು; ಜನಾಂಗಗಳ ಆಸ್ತಿಯನ್ನನುಭವಿಸುವಿರಿ, ಅವುಗಳ ವೈಭವವನ್ನು ಪಡೆದು ಹೊಗಳಿಕೊಳ್ಳುವಿರಿ.
Kannada Bible (KNCL) BSI 2016
“ಸರ್ವೇಶ್ವರನ ಯಾಜಕರು’ ಎಂಬ ಬಿರುದು ನಿಮ್ಮದಾಗುವುದು “ನಮ್ಮ ದೇವರ ಪರಿಚಾರಕರು” ಎಂಬ ಹೆಸರು ನಿಮಗೆ ಬರುವುದು. ಅನುಭವಿಸುವಿರಿ ಅನ್ಯರಾಷ್ಟ್ರಗಳ ಸಂಪತ್ತನ್ನು ಹೆಮ್ಮೆಪಡುವಿರಿ ಆ ಸಿರಿ ನಿಮ್ಮದಾಯಿತೆಂದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ನೀವು ಯೆಹೋವ ದೇವರ ಯಾಜಕರೆಂಬ ಬಿರುದನ್ನು ಹೊಂದುವಿರಿ. ನಮ್ಮ ದೇವರ ಸೇವಕರೆಂದು ನಿಮಗೆ ಹೆಸರಾಗುವುದು, ಜನಾಂಗಗಳ ಆಸ್ತಿಯನ್ನು ಅನುಭವಿಸುವಿರಿ. ಅವರ ವೈಭವವನ್ನು ಪಡೆದು ಹೊಗಳಿಕೊಳ್ಳುವಿರಿ.