Isaiah 62:11 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇಗೋ, ಯೆಹೋವನು ದೂರದೇಶಗಳವರಿಗೆ ಹೇಳುವುದೇನೆಂದರೆ, “ಚೀಯೋನಿನ ಜನರಿಗೆ ತಿಳಿಸಿರಿ: ‘ನೋಡು, ನಿನ್ನ ರಕ್ಷಕನು ಬರುತ್ತಿದ್ದಾನೆ. ತನ್ನ ಕೈಯಲ್ಲಿ ನಿನಗೆ ಪ್ರತಿಫಲವನ್ನು ತೆಗೆದುಕೊಂಡು ಬರುತ್ತಿದ್ದಾನೆ.”‘
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಇಗೋ, ನಿನ್ನ ರಕ್ಷಣೆಯು ಸಮೀಪವಾಯಿತು, ಯೆಹೋವನು ದಯಪಾಲಿಸುವ ಬಹುಮಾನವು ಆತನ ಮುಂದಿದೆ ಎಂದು ಚೀಯೋನೆಂಬಾಕೆಗೆ ಹೇಳಿರಿ” ಎಂಬುದಾಗಿ ಯೆಹೋವನು ಭೂಮಿಯ ಕಟ್ಟಕಡೆಯವರೆಗೂ ಅಪ್ಪಣೆಮಾಡಿದ್ದಾನೆ.
Kannada BSI Bible 2016
ಇಗೋ, ಕರ್ತನು ಭೂಮಿಯ ಅಂತ್ಯದ ವರೆಗೆ ಪ್ರಕಟಿಸಿದ್ದಾನೆ. ಚೀಯೋನಿನ ಕುಮಾ ರಿಯೇ--ಇಗೋ, ನಿನ್ನ ರಕ್ಷಣೆಯು ಬರುತ್ತದೆ; ಆತನ ಬಹುಮಾನವು ಆತನ ಸಂಗಡವೂ ಆತನ ಕೆಲಸವು ಆತನ ಮುಂದೆಯೂ ಅದೆ ಎಂದು ಹೇಳಿರಿ.ಆಗ ಅವರು--ಪರಿಶುದ್ಧ ಜನರೂ ಕರ್ತನು ವಿಮೋಚಿಸಿದ ವರೂ ಎಂದು ಕರೆಯಲ್ಪಡುವರು; ನೀನು ಕಂಡು ಕೊಳ್ಳಲ್ಪಟ್ಟವಳೂ ತೊರೆಯಲ್ಪಡದ ಪಟ್ಟಣವೂ ಎಂದು ಕರೆಯಲ್ಪಡುವಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಗೋ, ನಿನ್ನ ರಕ್ಷಣೆಯು ಸಮೀಪವಾಯಿತು, ಯೆಹೋವನು ದಯಪಾಲಿಸುವ ಬಹುಮಾನವು ಆತನೊಂದಿಗಿದೆ, ಆತನು ಅನುಗ್ರಹಿಸುವ ಪ್ರತಿಫಲವು ಆತನ ಮುಂದಿದೆ ಎಂದು ಚೀಯೋನೆಂಬಾಕೆಗೆ ಹೇಳಿರಿ ಎಂಬದಾಗಿ ಯೆಹೋವನು ಭೂವಿುಯ ಕಟ್ಟಕಡೆಯವರೆಗೂ ಅಪ್ಪಣೆಮಾಡಿದ್ದಾನೆ.
Kannada Bible (KNCL) BSI 2016
ಇಗೋ, ಸಮೀಪಿಸುತ್ತಿದೆ ನೀವು ಮುಕ್ತಿಹೊಂದುವದಿನ ಆತನೊಂದಿಗಿದೆ ಆತ ನೀಡುವ ಬಹುಮಾನ ಆತನ ಮುಂದಿದೆ ಆತ ಗಳಿಸಿದ ವರಮಾನ. ಇದನು ತಿಳಿಯಹೇಳಿರಿ ಸಿಯೋನೆಂಬಾಕೆಗೆ ಸರ್ವೇಶ್ವರನ ಆಜ್ಞೆಯಿದು ಜಗದ ದಿಗಂತದವರೆಗೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಗೋ, ಯೆಹೋವ ದೇವರು ಭೂಮಿಯ ಅಂತ್ಯದವರೆಗೆ ಹೀಗೆ ಘೋಷಣೆ ಮಾಡಿದ್ದಾರೆ: “ಚೀಯೋನಿನ ಪುತ್ರಿ ಇಗೋ, ‘ನಿನ್ನ ರಕ್ಷಣೆಯು ಬರುತ್ತದೆ. ಆತನ ಬಹುಮಾನವು ಆತನ ಸಂಗಡ, ಆತನ ಪ್ರತಿಫಲವು ಆತನ ಮುಂದೆಯೂ ಇದೆ ಎಂದು ಹೇಳಿರಿ.’ ”